ಕಳಕಪ್ಪ ಬಂಡಿ ಪರ ಸಂಕನೂರ ಪ್ರಚಾರ

7

ಕಳಕಪ್ಪ ಬಂಡಿ ಪರ ಸಂಕನೂರ ಪ್ರಚಾರ

Published:
Updated:

ರೋಣ: ‘ಕಾಂಗ್ರೆಸ್ ಪಕ್ಷದ ಐದು ವರ್ಷದ ಆಡಳಿತದ ಅವಧಿಯಲ್ಲಿ ಅಭಿವೃದ್ದಿ ಕೆಲಸಗಳು ಶೂನ್ಯವಾಗಿವೆ. ರೈತರಿಗೆ ಯುವಕರಿಗೆ ಬಡಜನರಿಗೆ ಸಿದ್ದರಾಮಯ್ಯನವರಿಂದ ಅನ್ಯಾಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ದೂರಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಂಕನೂರ ದೇವಸ್ಥಾನದ ಸುತ್ತಲಿನ ಪ್ರದೇಶಗಳಿಗೆ ಸಂಚರಿಸಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಪರ ಪ್ರಚಾರ ಮಾಡಿದ ನಂತರ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಇಡೀ ದೇಶದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಸರ್ಕಾರ ಯಾವುದಾದರೂ ಇದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರ ಮಾತ್ರ. ರೈತರಿಗೆ ಸಹಾಯ ಮಾಡಿಲಿಲ್ಲ. ಯುವಕರಿಗೆ ಸಹಾಯ ಮಾಡಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರಗಳು ದೌರ್ಜನ್ಯಗಳು ನಡೆಯುತ್ಲೇ ಇವೆ. 3,800 ಕ್ಕೂ ಅಧಿಕ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಸರ್ಕಾರದಿಂದ ಯಾವುದೇ ಪರಿಹಾರ ಸಿಗಲಿಲ್ಲ. ಇಷ್ಟೆಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರನ್ನು ದೂರುತ್ತಾರೆ. ಇದು ಅವರ ವ್ಯಕ್ತಿತ್ವ ತೋರಿಸಿಕೊಡುತ್ತದೆ. ಜನರು ಜಾಗೃತರಾಗಬೇಕು’ ಎಂದರು.

ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಅಶೋಕ ನವಲಗುಂದ, ಬಸವರಾಜ ಕೊಟಗಿ, ಮುತ್ತು ಗಡಗಿ, ಅನಿಲಕುಮಾರ ಪಲ್ಲೇದ, ಸುಭಾಸ ಅಳ್ಳೋಳ್ಳಿ, ರವಿ ದೇಶಣ್ಣವರ ಹಾಜರಿದ್ದರು.

ಲಮಾಣಿ ಪರ ಪ್ರಚಾರ

ಲಕ್ಷ್ಮೇಶ್ವರ: ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಮಂಗಳವಾರ ಲಕ್ಷ್ಮೇಶ್ವರ ಸಮೀಪದ ಅಡರಕಟ್ಟಿ, ಮಂಜಲಾಪುರ ಹಾಗೂ ಅಡರಕಟ್ಟಿ ತಾಂಡಾಗಳಲ್ಲಿ ತಮ್ಮ ಅನೇಕ ಬೆಂಬಲಿಗರೊದಿಗೆ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry