4

ಮೋದಿ ಇರುವಾಗ ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ವಾಟ್ಸ್ಆ್ಯಪ್ ಮತ್ತು ಟ್ವಿಟರ್ ಯಾಕೆ?

Published:
Updated:
ಮೋದಿ ಇರುವಾಗ ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ವಾಟ್ಸ್ಆ್ಯಪ್ ಮತ್ತು ಟ್ವಿಟರ್ ಯಾಕೆ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇರುವಾಗ ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ವಾಟ್ಸ್ಆ್ಯಪ್ ಮತ್ತು ಟ್ವಿಟರ್ ಯಾಕೆ? ಎಂದು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆ ರಮ್ಯಾ ಲೇವಡಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಡಿಎನ್‍ಎ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ರಮ್ಯಾ ಈ ಮಾತನ್ನಾಡಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ವಾಟ್ಸ್ಆ್ಯಪ್ ಬಳಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯನ್ನು ಎದುರಿಸಲು ನಿಮ್ಮ ಯೋಜನೆಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಪ್ರಧಾನಿಯವರೇ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರಲ್ಲಾ ಎಂದಿದ್ದಾರೆ.

ಕರ್ನಾಟಕದಲ್ಲಿ ಸುಳ್ಳು ಸುದ್ದಿ ಎಂಬುದು ಎಷ್ಟರ ಮಟ್ಟಿಗೆ ಗಂಭೀರ ಸಮಸ್ಯೆಯಾಗಿದೆ? ಎಂಬ ಪ್ರಶ್ನೆಗೆ ರಮ್ಯಾ ನೀಡಿದ ಉತ್ತರ ಹೀಗಿತ್ತು.

ಸುಳ್ಳು ಸುದ್ದಿ  (ಫೇಕ್ ನ್ಯೂಸ್ ) ದೊಡ್ಡ ಸಮಸ್ಯೆ ಹೌದು. ಇದು ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿಯಂಥಾ ರಾಜಕಾರಣಿಗಳನ್ನು ಗೆಲ್ಲುವಂತೆ ಮಾಡುತ್ತದೆ ಎಂಬುದೂ ನಮಗೆ ಗೊತ್ತಿದೆ. ಸುಳ್ಳು ಸುದ್ದಿಗಳನ್ನು ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಬಿಜೆಪಿ ಎಲ್ಲ ಚುನಾವಣೆಗಳಲ್ಲಿಯೂ ಸುಳ್ಳು ಸುದ್ದಿ ಹಬ್ಬಿಸಿದೆ. ಗುಜರಾತ್ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ  ಮನಮೋಹನ್ ಸಿಂಗ್ ವಿರುದ್ಧ ಹೇಳಿಕೆಯೊಂದನ್ನು ನೀಡಿದ್ದರು. ಅಹಮದ್ ಪಟೇಲ್ ವಿರುದ್ಧ ಪಿಸುಮಾತಿನ ಅಪಪ್ರಚಾರ ಮಾಡಿದ್ದರೂ ಅವರು ಗೆದ್ದು ಮುಖ್ಯಮಂತ್ರಿ ಗದ್ದುಗೆಯೇರಿದ್ದರು. ಸುಳ್ಳುಸುದ್ದಿಗಳಿಂದ ಏನೆಲ್ಲಾ ಆಗುತ್ತಿದೆ ಎಂಬುದು ನಮಗೆ ಗೊತ್ತಿದೆ.

ಮನಮೋಹನ್ ಸಿಂಗ್ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಲಿಲ್ಲವೇ? ಸುಳ್ಳು ಸುದ್ದಿ ಹಬ್ಬಿಸಲು ಪ್ರಧಾನಿಯೇ ಇರುವಾಗ ಅವರಿಗೆ ವಾಟ್ಸ್ಆ್ಯಪ್ ಮತ್ತು ಟ್ವಿಟರ್ ಅಗತ್ಯವಿಲ್ಲ. ಮೋದಿಯವರು ಮನಮೋಹನ್ ಸಿಂಗ್ ಅವರ ಬಗ್ಗೆ ಮಾಡಿದ ಆರೋಪಗಳೆಲ್ಲವೂ ನಿರಾಧಾರ ಎಂದು ರಮ್ಯಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry