₹31.55 ಕೋಟಿ ನಗದು ಸೇರಿ ₹40 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

ಶುಕ್ರವಾರ, ಮಾರ್ಚ್ 22, 2019
26 °C

₹31.55 ಕೋಟಿ ನಗದು ಸೇರಿ ₹40 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

Published:
Updated:
₹31.55 ಕೋಟಿ ನಗದು ಸೇರಿ ₹40 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯಲು ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಹಾಗೂ ಪೊಲೀಸ್‌ ಇಲಾಖೆ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಮತ್ತು ದಾಖಲೆಗಳಿಲ್ಲದ ಒಟ್ಟು ₹40.04 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿವೆ.

₹31.55 ಕೋಟಿ ನಗದು, ₹4.58 ಕೋಟಿ ಮೌಲ್ಯದ 1.15 ಲಕ್ಷ ಲೀಟರ್‌ ಮದ್ಯ, ₹19.79 ಲಕ್ಷ ಮೌಲ್ಯದ 30.52 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

₹3.59 ಕೋಟಿ ಮೌಲ್ಯದ 14.492 ಕೆ.ಜಿ. ಚಿನ್ನ, ₹12.67 ಲಕ್ಷ ಮೌಲ್ಯದ ಬೆಳ್ಳಿಯನ್ನು ಚುನಾವಣಾ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry