ದಲಿತರ ಹಿತ ಕಾಯುವ ಜೆಡಿಎಸ್‌: ಸಂಸದ

7
ಪಾಂಡವಪುರ: ಜೆಡಿಎಸ್‌–ಬಿಎಸ್‌ಪಿಯಿಂದ ‘ದಲಿತರ ರಾಜಕೀಯ ಜಾಗೃತಿ ಸಮಾವೇಶ’

ದಲಿತರ ಹಿತ ಕಾಯುವ ಜೆಡಿಎಸ್‌: ಸಂಸದ

Published:
Updated:

ಪಾಂಡವಪುರ: ದಲಿತ ಸಮುದಾಯದ ಹಿತಕಾಯುತ್ತಿರುವ ಜೆಡಿಎಸ್‌ ಅನ್ನು ದಲಿತರು ಬೆಂಬಲಿಸುವ ಮೂಲಕ ಜೆಡಿಎಸ್‌–ಬಿಎಸ್‌ಪಿ ಮೈತ್ರಿ ಸರ್ಕಾರ ರಚಿಸಲು ಶ್ರಮಿಸಬೇಕು ಎಂದು ಜೆಡಿಎಸ್‌ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಟಿಎಪಿಸಿಎಂಸ್‌ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ತಾಲ್ಲೂಕು ಘಟಕ ಎಸ್‌ಸಿ, ಎಸ್‌ಟಿ ವಿಭಾಗ ಮತ್ತು ಬಿಎಸ್‌ಪಿ ಮಂಗಳವಾರ ಆಯೋಜಿಸಿದ್ದ ‘ದಲಿತರ ರಾಜಕೀಯ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ನಾಯಕತ್ವವನ್ನು ಒಪ್ಪಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಬೆಂಬಲ ನೀಡಿದ್ದಾರೆ. ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದರು. ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಯೋಗ್ಯತೆಗಳನ್ನು ಸಹ ಮತದಾರರು ಅರ್ಥಮಾಡಿಕೊಂಡಿದ್ದಾರೆ’ ಎಂದರು.

ಜೆಡಿಎಸ್‌ ಎಸ್‌ಸಿ–ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಮಾತನಾಡಿ, ‘ದಲಿತರ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿರುವ ಪುಟ್ಟರಾಜು ಅವರನ್ನು ದಲಿತ ಬಂಧುಗಳು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಎಸ್‌ಸಿ–ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್‌, ತಾಲ್ಲೂಕು ಘಟಕ ಅಧ್ಯಕ್ಷ ಹಿರೇಮರಳಿ ಧರ್ಮರಾಜು, ಬಿಎಸ್‌ಪಿ ಮುಖಂಡ ಸಿದ್ದಯ್ಯ, ಜೆಡಿಎಸ್‌ ಎಸ್‌ಸಿಎಸ್‌ಟಿ ಜಿ‌ಲ್ಲಾಧ್ಯಕ್ಷ ಜಯರಾಮು, ತಾಲ್ಲೂಕು ಘಟಕದ ಅಧ್ಯಕ್ಷ ಬೊಮ್ಮರಾಜು, ಕಾರ್ಯಾಧ್ಯಕ್ಷ ಚಂದ್ರು,ಬಿಎಸ್‌ಪಿ ಮುಖಂಡ ನಲ್ಲಹಳ್ಳಿ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಅಶೋಕ, ತಿಮ್ಮೇಗೌಡ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಮಂಜುಳಾ, ತಾಲ್ಲೂಕು ಮಹಿಳಾ ಘಟಕದ ಆಧ್ಯಕ್ಷೆ ರಾಧಮ್ಮ, ಕಾರ್ಯಾಧ್ಯಕ್ಷೆ ಎಸ್‌.ಎ.ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ,

ಮಾಜಿ ಅಧ್ಯಕ್ಷ ಎಚ್.ಎಂ.ರಾಮಕೃಷ್ಣ, ಎಪಿಎಂಸಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್, ವಕೀಲ ಕಣಿವೆ ಯೋಗೀಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry