ಮಂಗಳವಾರ, ಜೂಲೈ 7, 2020
27 °C

ಹೇರ್‌ಸ್ಟೈಲ್ ಹೇಳುವ ರೋಬೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೇರ್‌ಸ್ಟೈಲ್ ಹೇಳುವ ರೋಬೊ

ಮನುಷ್ಯರು ಮಾಡುವ ಸಾಕಷ್ಟು ಕೆಲಸವನ್ನು ರೋಬೊಗಳು ಮಾಡುತ್ತಿವೆ. ಮನೆಯಲ್ಲಿ, ಕಚೇರಿಯಲ್ಲಿ, ಡ್ರೈವಿಂಗ್‌ನಲ್ಲಿ... ಎಲ್ಲೆಂದರಲ್ಲಿ ದಾಂಗುಡಿ ಇಟ್ಟಿವೆ. ಆದರೆ ನೀವು ನಿರೀಕ್ಷೆ ಮಾಡಲು ಸಾಧ್ಯವಾಗದ ಜಾಗವೊಂದಕ್ಕೂಈಗ ರೋಬೊ ಕಾಲಿಟ್ಟಿದೆ.

ಅದು ಕಟಿಂಗ್‌ ಶಾಪ್‌ಗೆ. ಟೋಕಿಯೊದ ‘ಪರ್ಕಟ್ ಬಾರ್ಬರ್ ಶಾಪ್’ ಈ ರೋಬೊವನ್ನು ತನ್ನ ಗ್ರಾಹಕರಿಗೆಂದೇ ಪರಿಚಯಿಸಿದೆ. ತಮ್ಮ ಸರದಿಗೆ ಗಂಟೆಗಟ್ಟಲೆ ಕಾಯುವ ಗ್ರಾಹಕರು ಸುಲಭವಾಗಿ ಸಮಯವನ್ನು ಕಳೆಯಲು ಈ ರೋಬೊ ಸಹಕರಿಸುತ್ತದೆಯಂತೆ. ಹಾಗೆಂದು ಸುಖಾಸುಮ್ಮನೆ ಕಾಲ ತಳ್ಳುವುದಿಲ್ಲ ಇದು. ನಿಮ್ಮನ್ನು ಚೆಂದಗಾಣಿಸಲು ಏನು ಮಾಡಬೇಕೋ ಆ ಕೆಲಸವನ್ನು ಮಾಡುತ್ತದೆ.

ಇದರ ಹೆಸರು ಪೆಪ್ಪರ್. ಇಲ್ಲಿಗೆ ಬಂದ ಗ್ರಾಹಕರಿಗೆ, ಅವರಿಗೆ ಯಾವ ಕೇಶ ಶೈಲಿ ಸುಂದರವಾಗಿ ಕಾಣಿಸುತ್ತದೆ ಎಂಬ ಕುರಿತು ಸಲಹೆ ನೀಡುವುದು ಇದರ ಕೆಲಸ.ಹಳೇ ಹೇರ್‌ಸ್ಟೈಲ್‌ಗೇ ಜೋತುಬೀಳುವ ಬದಲು ಹೊಸದನ್ನು ಪ್ರಯತ್ನಿಸುವ ಅವಕಾಶವನ್ನು ಈ ರೋಬೊ ನೀಡುತ್ತದೆ.‌ ಇದು ಈ ಶಾಪ್‌ನ ಸ್ಮಾರ್ಟ್‌ ಅಸಿಸ್ಟೆಂಟ್ ಕೂಡ ಹೌದು.

ರೋಬೊಗೆ, ಯಾವ ಹೇರ್‌ಸ್ಟೈಲ್ ಮಾಡಿಸಿದರೆ ಚೆನ್ನಾಗಿರುತ್ತದೆ ಎಂದು ಪ್ರಶ್ನಿಸಿದರೆ, ಅದಕ್ಕೆ ಸಮಾಲೋಚಿಸಿ ತಕ್ಕ ಉತ್ತರ ನೀಡುತ್ತದೆ. ನಿಮ್ಮ ಚಿತ್ರವನ್ನು ಭಿನ್ನ ಹೇರ್‌ಸ್ಟೈಲ್‌ಗಳೊಂದಿಗೆ ಹೋಲಿಸಿ ಪ್ರಿವ್ಯೂ ಚಿತ್ರ ತೋರಿಸಿ, ನಿಮಗೆ ಒಪ್ಪಿಗೆಯಾದರೆ ಮುಂದುವರೆಯುವಂತೆ ಸೂಚಿಸುತ್ತದೆ.ಇಷ್ಟವಿಲ್ಲವೆಂದರೆ ಇನ್ನೂ ಹಲವು ಹೇರ್‌ಸ್ಟೈಲ್‌ಗಳೊಂದಿಗೆ ತಾಳೆ ಹಾಕಿ ನಿಮ್ಮ ಮನವೊಪ್ಪುವ ಶೈಲಿಯನ್ನು ನೀಡುತ್ತದೆ.‌ ಈ ರೋಬೊ ಕಾರ್ಯವೈಖರಿ ನೋಡಲೆಂದೇ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆಯಂತೆ. ಉತ್ಸಾಹದಿಂದ ಥರ ಥರ ಶೈಲಿಗಳನ್ನು ಮಾಡಿಸಿಕೊಂಡು ಖುಷಿ ಪಡುವವರೂ ಹೆಚ್ಚಿದ್ದಾರಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.