ಮಂಗಳವಾರ, ಡಿಸೆಂಬರ್ 10, 2019
25 °C

ಬಸವೇಶ್ವರರು ಸಾರಿದ ಸೌಹಾರ್ದತೆ, ಏಕತೆ ನಮಗೆ ಸದಾ ಪ್ರೇರಣೆ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವೇಶ್ವರರು ಸಾರಿದ ಸೌಹಾರ್ದತೆ, ಏಕತೆ ನಮಗೆ ಸದಾ ಪ್ರೇರಣೆ: ಮೋದಿ

ನವದೆಹಲಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಸಂದರ್ಭದಲ್ಲಿ ಬಸವಣ್ಣನವರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ಕನ್ನಡದಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ, ‘ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದತೆ, ಸಹೋದರತ್ವ, ಏಕತೆ ಮತ್ತು ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ, ನಮಗೆ ಸದಾ ಪ್ರೇರಣೆ ಎಂದು ಹೇಳಿದ್ದಾರೆ.

‘ಜಗದ್ಗುರು ಬಸವೇಶ್ವರರು ನಮ್ಮ ಸಮಾಜವನ್ನು ಒಂದುಗೂಡಿಸಿದರು ಮತ್ತು  ಜ್ಞಾನದ ಪ್ರಾಮುಖ್ಯತೆಗೆ ಮಹತ್ವ ನೀಡಿದರು’ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)