ಭಾನುವಾರ, ಡಿಸೆಂಬರ್ 15, 2019
23 °C

ತೆರೆಸಾ ಮೆ ಭೇಟಿ; ಲಂಡನ್‌ನಲ್ಲಿ ಬಸವೇಶ್ವರರ ಪುತ್ಥಳಿಗೆ ಮೋದಿ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರೆಸಾ ಮೆ ಭೇಟಿ; ಲಂಡನ್‌ನಲ್ಲಿ ಬಸವೇಶ್ವರರ ಪುತ್ಥಳಿಗೆ ಮೋದಿ ನಮನ

ಇಂಗ್ಲೆಂಡ್‌: ಸಿಎಚ್‌ಒಜಿಎಂ ಶೃಂಗದಲ್ಲಿ ಭಾಗವಹಿಸುವುದು ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರವಾಸಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬ್ರಿಟಿಷ್‌ ಪ್ರಧಾನಿ ತೆರೆಸಾ ಮೆ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ಸಹಕಾರ ಕುರಿತು ಮಾತುಕತೆ ನಡೆಸಿದರು.

ಬಳಿಕ, ಇಂಗ್ಲೆಂಡ್‌ನ ಪ್ರಿನ್ಸ್ ಆಫ್‌ ವೇಲ್ಸ್‌ ಹಾಗೂ ನರೇಂದ್ರ ಮೋದಿ ಅವರು ಜತೆಯಾಗಿ ಭಾರತದ ಸಾಧನೆಗಳನ್ನು ಬಿಂಬಿಸುವ ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಇದೇ ವೇಳೆ ಇಂಗ್ಲೆಂಡ್‌ನ ಭಾರತೀಯ ನಿವಾಸಿಗಳನ್ನು ಭೇಟಿ ಮಾಡಿದರು.

ಬಾಹ್ಯಾಕಾಶ ಸಂಶೋಧನೆ ಮತ್ತು ಎಂಜಿನಿಯರಿಂಗ್‌ ಸೇರಿದಂತೆ ವಿಜ್ಞಾನ, ತಂತ್ರಜ್ಞಾನದ ಇತಿಹಾಸದಲ್ಲಿ ಭಾರತದ ಪಾತ್ರವನ್ನು ಈ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. 

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಉಭಯ ನಾಯಕರು ‘ಅಕಾಡೆಮಿ ಸೌತ್‌ ಏಷ್ಯನ್‌ ಡ್ಯಾನ್ಸ್’ ತಂಡದ ನೃತ್ಯವನ್ನು ವೀಕ್ಷಿಸಿದರು.

ಉಭಯ ನಾಯಕರು ವಸ್ತುಸಂಗ್ರಹಾಲಯದಲ್ಲಿ ಕುಶಲೋಪರಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿರುವ ಬಸವೇಶ್ವರರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)