ಶನಿವಾರ, ಆಗಸ್ಟ್ 8, 2020
22 °C

ಕನ್ನಡ ಚಿಕನ್ ಫುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಚಿಕನ್ ಫುಡ್

ನಾಟಿಕೋಳಿ ಹಾಗೂ ಮೊಟ್ಟೆಯ ಅಡುಗೆಗಳನ್ನೇ ಪರಿಚಯಿಸುವ ಆ್ಯಪ್‌ ‘ಕನ್ನಡ ಚಿಕನ್ ಫುಡ್’ (Kannada Chicken Food). ಇದರಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಯಲ್ಲೂ ಕೋಳಿ ಹಾಗೂ ಮೊಟ್ಟೆಯ ವಿಭಿನ್ನ ಅಡುಗೆಗಳನ್ನು ಇಲ್ಲಿ ವಿವರಿಸಿದ್ದಾರೆ.

ಮಂಗಳೂರು, ಆಂಧ್ರ, ಕೇರಳ, ಕೊಂಕಣಿ, ಕೊಹಿನೂರ್‌, ಕೊಡಗು ಹೀಗೆ ಬೇರೆ ಬೇರೆ ಭಾಗಗಳ ಅಡುಗೆ ಮಾಹಿತಿ ಇದೆ. ಚಿಕನ್‌ನಲ್ಲಿ ಆಲೂ ಚಿಕನ್‌ ಬಿರಿಯಾನಿ, ಗೋಡಂಬಿ ಚಿಕನ್‌ ಫ್ರೈಡ್‌ ರೈಸ್‌, ಮಂಗಳೂರು ಶೈಲಿಯ ಕೋಳಿ ಸುಕ್ಕ, ಅಪ್ಘಾನಿ ಚಿಕನ್‌ ಪಲಾವ್‌, ಅಮರಾವತಿ ಚಿಕನ್‌ ಫ್ರೈ.. ಹೀಗೆ ಬಗೆಬಗೆ ಅಪರೂಪದ ಕೋಳಿ ಖಾದ್ಯಗಳ ರೆಸಿಪಿಗಳನ್ನು ಕೊಟ್ಟಿದ್ದಾರೆ.

ಅಂಕೂರಿ ಮೊಟ್ಟೆ, ಅಮೆರಿಕನ್‌ ಶೈಲಿಯ ಹಾಲು– ಮೊಟ್ಟೆ ಜ್ಯೂಸ್‌, ಆಂಧ್ರ ಶೈಲಿಯ ಮೊಟ್ಟೆ ಕರಿ, ಆಲೂ ಎಗ್‌ ಫ್ರೈ.. ಹೀಗೆ ಮೊಟ್ಟೆಯಿಂದ ಮಾಡಬಹುದಾದ ತರಹೇವಾರಿ ಅಡುಗೆಗಳೂ ಇಲ್ಲಿವೆ.

ಪ್ಲೇಸ್ಟೋರ್‌ನಿಂದ ಈ ಅಡುಗೆ ಆ್ಯಪ್‌ ಅನ್ನು ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು. ಈ ಆ್ಯಪ್‌ ಓಪನ್‌ ಮಾಡಿದಾಗ ಚಿಕನ್‌ ರೆಸಿಪಿಗಳು, ಮೊಟ್ಟೆ ರೆಸಿಪಿಗಳು ಎಂದು ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ನಾಲ್ಕು ವಿಭಾಗಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ನಾವು ಖಾದ್ಯಗಳನ್ನು ಆಯ್ಕೆ ಮಾಡಿಕೊಂಡರೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಹಾಗೂ ಮಾಡುವ ವಿಧಾನ ಸಿಗುತ್ತದೆ.⇒v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.