ಸೋಮವಾರ, ಆಗಸ್ಟ್ 10, 2020
26 °C

90 ಮೀಟರ್ಸ್‌ ದೂರ ಜಾವೆಲಿನ್‌ ಎಸೆಯಬೇಕು

ಪಿಟಿಐ Updated:

ಅಕ್ಷರ ಗಾತ್ರ : | |

90 ಮೀಟರ್ಸ್‌ ದೂರ ಜಾವೆಲಿನ್‌ ಎಸೆಯಬೇಕು

ನವದೆಹಲಿ: ‘ಮುಂಬರುವ ಕೂಟಗಳಲ್ಲಿ 90 ಮೀಟರ್ಸ್‌ ದೂರ ಜಾವೆಲಿನ್‌ ಎಸೆಯುವ ಗುರಿ ಹೊಂದಿದ್ದೇನೆ. ಇದು ಸಾಧ್ಯವಾದರೆ ಖಂಡಿತವಾಗಿಯೂ ಒಲಿಂಪಿಕ್ಸ್‌ನಲ್ಲಿ ಪದಕ ಒಲಿಯಲಿದೆ’ ಎಂದು ಭಾರತದ ಜಾವೆಲಿನ್‌ ಎಸೆತ ಸ್ಪರ್ಧಿ ನೀರಜ್‌ ಚೋಪ್ರಾ ಹೇಳಿದ್ದಾರೆ.

ನೀರಜ್‌ ಅವರು ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಚಿನ್ನ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

‘ಕಾಮನ್‌ವೆಲ್ತ್‌ ಕೂಟಕ್ಕೂ ಮುನ್ನ ವೆರ್ನೆರ್‌ ಡೇನಿಯಲ್ಸ್‌ ಅವರ ಬಳಿ ಜರ್ಮನಿಯಲ್ಲಿ ಮೂರು ತಿಂಗಳು ತರಬೇತಿ ಪಡೆದಿದ್ದೆ. ಈ ಅವಧಿಯಲ್ಲಿ ಕಠಿಣ ಅಭ್ಯಾಸ ಮಾಡಿದ್ದೆ. ಹೀಗಾಗಿ ಚಿನ್ನ ಜಯಿಸಲು ಸಾಧ್ಯವಾಗಿದೆ’ ಎಂದಿದ್ದಾರೆ.

‘ಮುಂಬರುವ ಏಷ್ಯನ್‌ ಕ್ರೀಡಾಕೂಟ ಮತ್ತು 2019ರಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. ಇದಕ್ಕೂ ಮುನ್ನ ಡೈಮಂಡ್‌ ಲೀಗ್‌ ಟೂರ್ನಿಗಳಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ’ ಎಂದು ನುಡಿದಿದ್ದಾರೆ.

‘ಏಷ್ಯನ್‌ ಕ್ರೀಡಾಕೂಟದಲ್ಲಿ ಚೀನಾ ತೈಪೆ, ಕತಾರ್‌ ಮತ್ತು ಇತರೆ ಕೆಲ ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸುತ್ತಾರೆ. ಹೀಗಾಗಿ ಕೂಟಕ್ಕೂ ಮುನ್ನ ಪಟಿಯಾಲದಲ್ಲಿ ಅಭ್ಯಾಸ ನಡೆಸಲು ನಿ‌ರ್ಧಿಸಿದ್ದೇನೆ. ವಿದೇಶದಲ್ಲಿ ತರಬೇತಿ ಪಡೆಯುವ ಆಲೋಚನೆಯೂ ಇದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.