ಭಾನುವಾರ, ಡಿಸೆಂಬರ್ 15, 2019
19 °C

‘21ರಿಂದ ಸುಷ್ಮಾ ಚೀನಾ ಪ್ರವಾಸ ರಾಜಕೀಯ ವಿಶ್ವಾಸ ವೃದ್ಧಿ’

ಪಿಟಿಐ Updated:

ಅಕ್ಷರ ಗಾತ್ರ : | |

‘21ರಿಂದ ಸುಷ್ಮಾ ಚೀನಾ ಪ್ರವಾಸ ರಾಜಕೀಯ ವಿಶ್ವಾಸ ವೃದ್ಧಿ’

ಬೀಜಿಂಗ್‌: ಚೀನಾ ಮತ್ತು ಭಾರತ ನಡುವಿನ ಸಂಬಂಧ ಸುಧಾರಿಸುತ್ತಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರ ಮುಂಬರುವ ಚೀನಾ ಭೇಟಿ ಎರಡೂ ದೇಶಗಳ ‘ರಾಜಕೀಯ ವಿಶ್ವಾಸ’ ಹೆಚ್ಚಿಸಲಿದೆ ಎಂದು ಚೀನಾ ಅಭಿಪ್ರಾಯ ಪಟ್ಟಿದೆ.

ಸುಷ್ಮಾ ಸ್ವರಾಜ್‌ ಈ ತಿಂಗಳ 21ರಂದು ಚೀನಾಕ್ಕೆ ತೆರಳುವರು. ಚೀನಾದ ವಿದೇಶಾಂಗ ವ್ಯವಹಾರ ಸಚಿವ ವಾಂಗ್‌ ಯಿ ಅವರನ್ನು 22ರಂದು ಭೇಟಿಯಾಗಲಿದ್ದಾರೆ. 24ರಂದು ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ವೇಳೆ ಅವರು ದ್ವಿಪಕ್ಷೀಯ ಸಂಬಂಧ, ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ವಾಂಗ್‌ ಯಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

‘ಈ ಭೇಟಿ ಚೀನಾ– ಭಾರತ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸುವ ನಂಬಿಕೆ ಇದೆ. ನಾವು ಭಾರತದೊಂದಿಗೆ ಪ್ರಾಯೋಗಿಕ ಸಹ

ಕಾರ ವಿಸ್ತರಿಸಲು, ವಿವಾದಗಳನ್ನು ಸರಿಯಾಗಿ ನಿರ್ವಹಿಸಿ ದ್ವಿಪಕ್ಷೀಯ ಸಂಬಂಧ ಮುಂದುವರೆಸಲು ಬಯಸುತ್ತೇವೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಏ. 24ರಂದು ನಡೆಯಲಿರುವ ರಕ್ಷಣಾ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಚೀನಾಕ್ಕೆ ತೆರಳುವರು. ಜೂನ್‌ ತಿಂಗಳಲ್ಲಿ ಕ್ವಿಂಗ್‌ಡೊ ನಗರದಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಾಂಗ್ ಯಿ ಕಳೆದ ತಿಂಗಳು ರಾಜ್ಯ ಕೌನ್ಸಿಲರ್ ಆಗಿ ಉನ್ನತ ಸ್ಥಾನ ಪಡೆದ ನಂತರ ಇದು ಅವರ ಮೊದಲ ಸಭೆ. ಚೀನಾ ಭೇಟಿಯ ನಂತರ ಸುಷ್ಮಾ ಸ್ವರಾಜ್‌ ಮಂಗೋಲಿಯಾಕ್ಕೆ ತೆರಳಲಿದ್ದಾರೆ.

ಪ್ರತಿಕ್ರಿಯಿಸಿ (+)