ಭಾನುವಾರ, ಡಿಸೆಂಬರ್ 15, 2019
19 °C

ವಿಚಾರಣೆಗೆ ಹಾಜರಾದ ಶಮಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿಚಾರಣೆಗೆ ಹಾಜರಾದ ಶಮಿ

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹಮ್ಮದ್‌ ಶಮಿ ಬುಧವಾರ ಕೋಲ್ಕತ್ತ ಪೋಲಿಸರ ಎದುರು ವಿಚಾರಣೆಗೆ ಹಾಜರಾದರು.

ಕೌಟುಂಬಿಕ ದೌರ್ಜನ್ಯ ಮತ್ತು ಶೀಲ ಶಂಕಿಸಿ ಹಲ್ಲೆ ನಡೆಸಿದ್ದಾರೆಂದು ಪತ್ನಿ ಹಸೀನಾ ಜಹಾನ್‌ ಇತ್ತೀಚೆಗೆ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಶಮಿ ಅವರಿಗೆ ಸಮನ್ಸ್‌ ನೀಡಿದ್ದರು.

ಸೋಮವಾರ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಿನ ಐಪಿಎಲ್‌ ಪಂದ್ಯದಲ್ಲಿ ಶಮಿ, ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಿದ್ದರು. ಈ ಪಂದ್ಯ ಮುಗಿದ ನಂತರ ಕೋಲ್ಕತ್ತದಲ್ಲೇ ಉಳಿಯುವಂತೆ ಪೊಲೀಸರು ಶಮಿಗೆ ಸೂಚಿಸಿದ್ದರು.

‘ಬುಧವಾರ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದೇವೆ. ಶಮಿ ಅವರು ಸೂಕ್ತ ರೀತಿಯಲ್ಲಿ ಸಹಕರಿಸಿದ್ದಾರೆ. ಅಗತ್ಯ ಬಿದ್ದಾಗ ಮತ್ತೆ ವಿಚಾರಣೆಗೆ ಬರಬೇಕೆಂದು ಸೂಚಿಸಿದ್ದೇವೆ. ಅವರು ಐಪಿಎಲ್‌ ಪಂದ್ಯಗಳಲ್ಲಿ ಆಡಬಹುದು. ಇದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಜಂಟಿ ಪೊಲೀಸ್‌ ಆಯುಕ್ತ ಪ್ರವೀಣ್‌ ತ್ರಿಪಾಠಿ ತಿಳಿಸಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಡೇರ್‌ಡೆವಿಲ್ಸ್‌ ನಡುವಣ ಪಂದ್ಯ ಆಯೋಜನೆಯಾಗಿದ್ದು ಈ ಪಂದ್ಯದಲ್ಲಿ ಶಮಿ ಆಡಲಿದ್ದಾರೆ. ಗುರುವಾರ ಅವರು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)