ಪ್ರಚಾರ ಪ್ರಹಸನ

7

ಪ್ರಚಾರ ಪ್ರಹಸನ

Published:
Updated:

ಕಣ್ಗಾವಲು ಏನೇ ಇರಲಿ

ಹಬ್ಬದೂಟ ವಾಡಿಕೆ ಊಟದಲ್ಲಿ ತುಂಡು ಗುಂಡು

ಕೈಯ್ಯ ಕುಲುಕಿ ಬೇಡಿಕೆ!

ನಗುತ ಬೆರೆತು ಉಂಡು ತಿಂದ

ಪ್ರಹಸನ ಪ್ರಚಾರಕೆ ವಿಷಯ ತಿಳಿಸಿ ಮನವ ಒಲಿಸಿ

ನಮನ ನಿಮ್ಮ ಪಾದಕೆ!

ಬೇಕು ಬೆರಳಿಗೊಂದು ಚುಕ್ಕಿ

ನಶೆಯ ಮೇಲೂ ನಂಬಿಕೆ

ಅಮಲಿನೂಟ ಗೆಲುವಿನಾಟ

ಬೀಳಬೇಡಿ ಹಳ್ಳಕೆ!

– ದೇವಕಿಸುತ, ಬೆಂಗಳೂರು

ಉತ್ತಮ ಅಭ್ಯರ್ಥಿ ಗೆಲ್ಲಬೇಕು

ಏಳು ದಶಕಗಳಿಂದ ಪ್ರಜಾತಂತ್ರದ ರಾಜಕೀಯದ ಏಳು ಬೀಳುಗಳನ್ನು ಗಮನಿಸುತ್ತಿದ್ದೇವೆ. ಒಬ್ಬ ಭ್ರಷ್ಟನನ್ನು ಸೋಲಿಸಲು ಇನ್ನೊಬ್ಬ ಭ್ರಷ್ಟನಿಗೆ ವೋಟು ಹಾಕಿ ಗೆಲ್ಲಿಸುವ ಪರಂಪರೆಗೆ ಮತದಾರ ಅಂಟಿಕೊಂಡಿದ್ದರಿಂದ ಬಡತನ, ನಿರುದ್ಯೋಗ, ಹಸಿವು, ಅನಾರೋಗ್ಯ, ಸಾಂಸ್ಕೃತಿಕ

ಅಧಃಪತನದಂತಹ ಸಮಸ್ಯೆಗಳು ಜೀವಂತವಾಗಿರುವುದನ್ನು ನಾವಿಂದು ಕಾಣುವಂತಾಗಿದೆ. ಸರ್ಕಾರಗಳು ಬದಲಾದರೂ ಜನರ ಸಮಸ್ಯೆಗಳು ಬದಲಾಗುತ್ತಿಲ್ಲ. ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳನ್ನು ಪತ್ತೆ ಹಚ್ಚಿ ಪರಿಹಾರ ಒದಗಿಸಬಲ್ಲ ವ್ಯಕ್ತಿಯನ್ನು ನಾವು ಜನಪ್ರತಿಧಿಯಾಗಿ ಆಯ್ಕೆ ಮಾಡಬೇಕಿದೆ.

ಪ್ರಬಲ ರಾಜಕೀಯ ಪಕ್ಷಗಳ ಪೈಪೋಟಿಯ ಮಧ್ಯೆ ಪಕ್ಷೇತರನಾಗಿ ನಿಂತ ಜನಪರ ಹೋರಾಟಗಾರ ಗೆಲ್ಲಲಿ ಅಥವಾ ಸೋಲಲಿ ಆತನಿಗೆ ಮತಗಳು ಹೋಗಬೇಕು. ಒಟ್ಟಾರೆ ನಮ್ಮ ಮತಗಳು ಭ್ರಷ್ಟ ವ್ಯಕ್ತಿಯ ಪಾಲಾಗಿ ಭ್ರಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು.

ಜಾತಿ, ಧರ್ಮ ಮೀರಿ ಆಲೋಚಿಸುವಸ್ಟು ಮತದಾರ ಪ್ರಬುದ್ಧನಾದಾಗ ಮಾತ್ರ ಉತ್ತಮ ಅಭ್ಯರ್ಥಿ ಅಧಿಕಾರಕ್ಕೆ ಬಂದು, ದುಡಿಯುವ ಜನರ ಧ್ವನಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಲು ಸಾಧ್ಯವಾಗುತ್ತದೆ.

– ರಾಜು ಕೆ. ಒಡೆಯರಾಜ್, ವಾಡಿ, ಚಿತ್ತಾಪುರ ತಾಲ್ಲೂಕು

ಕ್ರಮ ಕೈಗೊಳ್ಳಲಿ

ಎಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ನಮೂದಿಸುವಾಗ ಮೊದಲು ನಾಮಪತ್ರ ಸಲ್ಲಿಸಿದವರ ಹೆಸರುಗಳನ್ನೇ ಪರಿಗಣಿಸಬೇಕು. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಹೆಸರು ಮೊದಲು ಹಾಕಬಾರದು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

– ರವಿಕುಮಾರ ಗಾಯಕವಾಡ, ಸಿಂದಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry