ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 95 ಮಂದಿ ಉಸಿರಾಟಕ್ಕೆ ಅಶುದ್ಧ ಗಾಳಿ: ಭಾರತ ನಂ.1

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಾಸ್ಟನ್‌: ವಿಶ್ವದ ಶೇ 95ರಷ್ಟು ಜನರು ಅಶುದ್ಧ ಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಮಾಲಿನ್ಯ ಉಂಟು ಮಾಡುವುದರಲ್ಲಿ ಭಾರತ ಮತ್ತು ಚೀನಾದ ಪಾಲು ಅತಿ ಹೆಚ್ಚು ಎಂದು ಅಧ್ಯಯನ ವರದಿಯೊಂದು ಹೇಳಿದೆ.

‘ದೂಳಿನಲ್ಲಿರುವ ಚಿಕ್ಕಚಿಕ್ಕ ಕಣಗಳನ್ನು ಉಸಿರಾಡಿ ಅನಾರೋಗ್ಯಪೀಡಿತರಾಗುತ್ತಿರುವ ವಿಶ್ವದ ಒಟ್ಟೂ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಈ ಎರಡು ದೇಶದಲ್ಲೇ ಇದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದ ‘ಹೆಲ್ತ್‌ ಎಫೆಕ್ಟ್ಸ್‌ ಇನ್‌ಸ್ಟಿಟ್ಯೂಟ್‌’ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.

‘ಅಧಿಕ ರಕ್ತದೊತ್ತಡ, ಆಹಾರ ಕ್ರಮ ಮತ್ತು ಧೂಮಪಾನ ನಂತರ ವಿಶ್ವದಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ವಾಯುಮಾಲಿನ್ಯ. ಕಳೆದ ವರ್ಷ ಈ ಮಾಲಿನ್ಯದಿಂದಾಗಿ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಮಾಲಿನ್ಯದ ಕಾರಣ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್‌ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಹೊರಗಿನ ವಾತಾವರಣ ಮಾತ್ರವಲ್ಲದೇ ಮನೆಯ ಒಳಗೂ ಮಲಿನ ವಾತಾವರಣದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಅಡುಗೆಗೆ ಅಥವಾ ಕಾಯಿಸಲು ಬಳಸುವ ಉರುವಲುಗಳು ಕೂಡ ಮನುಷ್ಯನನ್ನು ಮಾಲಿನ್ಯಕ್ಕೆ ಒಡ್ಡುತ್ತಿವೆ. 2016ರಲ್ಲಿ ವಿಶ್ವದಲ್ಲಿ 200 ಕೋಟಿಗೂ ಹೆಚ್ಚು ಜನರು ಇಂತಹ ಮಾಲಿನ್ಯಕ್ಕೆ ತೆರೆದುಕೊಂಡಿದ್ದಾರೆ ಎಂದು ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

ಮನೆಯೊಳಗಿನ ವಾಯುಮಾಲಿನ್ಯವು ಸುತ್ತಲಿನ ಪ್ರದೇಶದ ವಾಯುಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭಾರತದಲ್ಲಿ ವಾಯುಮಾಲಿನ್ಯದಿಂದ ಮೃತಪಟ್ಟವರ ನಾಲ್ವರ ಪೈಕಿ ಒಬ್ಬರು ಇಂತಹ ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಮನೆಯೊಳಗೆ ಅಡುಗೆ ಇಂಧನ ಎಲ್‌ಪಿಜಿ ಮತ್ತು ಎಲೆಕ್ಟ್ರಿಕ್‌ ಸ್ಟೌಗಳ ಬಳಕೆಯಿಂದ ಘನ ಇಂಧನದ ಬಳಕೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT