ಮಂಗಳವಾರ, ಆಗಸ್ಟ್ 4, 2020
26 °C

ಲಂಡನ್‌ಗೆ ತೆರಳಿದ ಷರೀಫ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌ಗೆ ತೆರಳಿದ ಷರೀಫ್‌

ಲಾಹೋರ್‌: ಅನಾರೋಗ್ಯ ಪೀಡಿತರಾಗಿರುವ ಪತ್ನಿಯನ್ನು ನೋಡಲು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‌ ಬುಧವಾರ ಲಂಡನ್‌ಗೆ ಮಗಳೊಂದಿಗೆ ತೆರಳಿದ್ದಾರೆ.

ಮೂಲಗಳ ‍ಪ್ರಕಾರ, ಮೂರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಅವರನ್ನು ದೋಷಿಯೆಂದು ಘೋಷಿಸುವ ಸಾಧ್ಯತೆ ಇರುವ ಕಾರಣ ಸದ್ಯಕ್ಕೆ ಅವರು ಪಾಕಿಸ್ತಾನಕ್ಕೆ  ಮರಳುವುದಿಲ್ಲ.

ಕುಟುಂಬದವರೂ ಅವರು ಹಿಂದಿರುಗುವ ದಿನಾಂಕವನ್ನು ಬಹಿರಂಗ ಪಡಿಸಿಲ್ಲ.  ಭ್ರಷ್ಟಾಚಾರ ಪ್ರಕರಣದ ವಿಚಾರಣೆಗಾಗಿ ಅವರು ಏ.21ರಂದು ತನಿಖಾ ತಂಡದ ಎದುರು ಹಾಜರಾಗುವ ಸಾಧ್ಯತೆ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.