ಶುಕ್ರವಾರ, ಡಿಸೆಂಬರ್ 13, 2019
19 °C

‘ಸನ್‌ರೈಸರ್ಸ್‌ ಬೌಲಿಂಗ್‌ ಪಡೆ ಬಲಿಷ್ಠವಾಗಿದೆ’

ಪಿಟಿಐ Updated:

ಅಕ್ಷರ ಗಾತ್ರ : | |

‘ಸನ್‌ರೈಸರ್ಸ್‌ ಬೌಲಿಂಗ್‌ ಪಡೆ ಬಲಿಷ್ಠವಾಗಿದೆ’

ಮುಂಬೈ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬೌಲಿಂಗ್‌ ಪಡೆಯು ಬಲಿಷ್ಠವಾಗಿದೆ ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌ ಅಭಿಪ್ರಾಯಪಟ್ಟಿದ್ಧಾರೆ.

‘ಬೌಲಿಂಗ್‌ ವಿಭಾಗದಲ್ಲಿ ಈ ಸಲದ ಐಪಿಎಲ್‌ ತಂಡಗಳಲ್ಲೇ ಸನ್‌ರೈಸರ್ಸ್‌ ಅತ್ಯುತ್ತಮವಾಗಿದೆ. ಆ ತಂಡದ ಭುವನೇಶ್ವರ್‌ ಕುಮಾರ್‌ ನನ್ನ ಪ್ರಕಾರ ಶ್ರೇಷ್ಠ ಬೌಲರ್‌’ ಎಂದು ಅವರು ಹೇಳಿದ್ದಾರೆ.

‘ಟ್ವೆಂಟಿ–20 ಮಾದರಿ ಕ್ರಿಕೆಟ್‌ನಲ್ಲಿ ಅಫ್ಗಾನಿಸ್ತಾನದ ರಷೀದ್‌ ಖಾನ್‌ ಉತ್ತಮ ಸ್ಪಿನ್‌ ಬೌಲರ್‌. ಅವರೂ ಸನ್‌ರೈಸರ್ಸ್‌ನಲ್ಲಿದ್ದಾರೆ. ಎಂತಹ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಇವರಿಬ್ಬರು ಹೊಂದಿದ್ದಾರೆ. ಬೌಲರ್‌ಗಳಾದ ಸಿದ್ಧಾರ್ಥ ಕೌಲ್‌, ದೀಪಕ್‌ ಹೂಡಾ ಹಾಗೂ ಮೊಹಮ್ಮದ್‌ ನಬಿ ಅವರು ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸನ್‌ರೈಸರ್ಸ್‌ ನಂತರ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೊಂದಿರುವ ತಂಡ ಮುಂಬೈ ಇಂಡಿಯನ್ಸ್‌. ಜಸ್‌ಪ್ರೀತ್‌ ಬುಮ್ರಾ, ಮುಸ್ತಫಿಜುರ್‌ ರಹಮಾನ್‌ ಚೆನ್ನಾಗಿ ಬೌಲಿಂಗ್‌ ಮಾಡುತ್ತಿದ್ಧಾರೆ. ಬುಮ್ರಾ ಅಂತೂ ಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾಗುವ ರೀತಿ ಬೌಲಿಂಗ್‌ ಮಾಡುತ್ತಿದ್ದಾರೆ. ಒತ್ತಡ ಎದುರಿಸಿ ಎದುರಾಳಿಯನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ’ ಎಂದೂ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)