ಶುಕ್ರವಾರ, ಡಿಸೆಂಬರ್ 6, 2019
26 °C

‘ಇನಿಂಗ್ಸ್ ಆರಂಭಿಸುವುದು ಸಂತಸ ತಂದಿದೆ’

Published:
Updated:
‘ಇನಿಂಗ್ಸ್ ಆರಂಭಿಸುವುದು ಸಂತಸ ತಂದಿದೆ’

ಚಂಡೀಗಡ: ‘ಸನ್‌ರೈಸರ್ಸ್‌ ತಂಡದ ಪರವಾಗಿ ಆರಂಭಿಕ ಬ್ಯಾಟ್ಸಮನ್‌ ಆಗಿ ಅಂಗಳಕ್ಕಿಳಿಯುವುದು ಸಂತಸ ತಂದಿದೆ’ ಎಂದು ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ವೃದ್ಧಿಮಾನ್‌ ಸಹಾ ಹೇಳಿದರು.

ಇಲ್ಲಿನ ಮಾಧ್ಯಮಗಳೊಂದಿಗೆ ಅವರು ಬುಧವಾರ ಮಾತನಾಡಿದರು.

‘ತಂಡದ ಆರಂಭಿಕ ಬ್ಯಾಟ್ಸಮನ್‌ ಆಗಿ ಉತ್ತಮ ಬುನಾದಿ ಕಟ್ಟುವ ಜವಾ ಬ್ದಾರಿ ನನಗೆ ಸಿಕ್ಕಿದೆ. ಈ ವಿಷಯದಲ್ಲಿ ತಂಡದ ಕೋಚ್‌ ಟಾಮ್‌ ಮೂಡಿ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ ಅವರು ನನಗೆ ಎಲ್ಲ ರೀತಿಯ ಬೆಂಬಲ ನೀಡಿದ್ದಾರೆ. ಯಾವುದೇ ರೀತಿಯ ಒತ್ತಡ ಹೇರದೆ, ನನ್ನ ಸ್ವಾಭಾವಿಕ ಆಟಕ್ಕೆ ಒತ್ತು ನೀಡುವಂತೆ ಅವರು ಸಲಹೆ ನೀಡಿದ್ದಾರೆ’ ಎಂದರು.

‘ನಾನು ಆರಂಭಿಕ ಬ್ಯಾಟ್ಸಮನ್‌ ಆಗಿ ಮುಂದುವರಿಯುವ ಬಗ್ಗೆ ತಂಡದ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ತಂಡ ನನ್ನ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳಬೇಕು. ಈಗ ನೀಡಿರುವ ಅವಕಾಶವನ್ನು ಬಳಸಿಕೊಂಡು ತಂಡದ ಗೆಲುವಿಗೆ ಶ್ರಮಿಸಬೇಕಿದೆ. ನನ್ನ ಸಾಮರ್ಥ್ಯವನ್ನು ಇನ್ನೂ ಉತ್ತಮಪಡಿಸಿಕೊಳ್ಳಬೇಕಿದೆ’ ಎಂದೂ ತಿಳಿಸಿದರು.

‘ಕೇನ್‌ ಅವರು ಉತ್ತಮ ನಾಯ ಕತ್ವದ ಗುಣಗಳನ್ನು ಹೊಂದಿದ್ದಾರೆ. ತಂಡದ ಸಹ ಆಟಗಾರರು ನೀಡುವ ಸಲಹೆಗಳನ್ನು ಮುಕ್ತವಾಗಿ ಆಲಿಸುತ್ತಾರೆ. ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಪ್ರೋತ್ಸಾಹ ನೀಡುತ್ತಾರೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)