ಶುಕ್ರವಾರ, ಡಿಸೆಂಬರ್ 13, 2019
19 °C

ಯೆಚೂರಿ ನಿಲುವಿಗೆ ಹಿನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಯೆಚೂರಿ ನಿಲುವಿಗೆ ಹಿನ್ನಡೆ

ಹೈದರಾಬಾದ್: ಸಿಪಿಎಂನ ಮುಂದಿನ ಮೂರು ವರ್ಷಗಳ ರಾಜಕೀಯ ನಿಲುವು ಮತ್ತು ಕಾರ್ಯತಂತ್ರಗಳನ್ನು ನಿಗದಿಪಡಿಸುವ ಅಧಿವೇಶನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ತಮ್ಮ ನಿಲುವನ್ನು ಮಂಡಿಸದಂತೆ ತಡೆಯಲಾಗಿದೆ.

ಯೆಚೂರಿ ಬದಲಿಗೆ ಪಕ್ಷದ ರಾಜಕೀಯ ಕಾರ್ಯತಂತ್ರಗಳ ಕರಡನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮಂಡಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು, ಕಾಂಗ್ರೆಸ್‌ ಸೇರಿದಂತೆ ಪ್ರಜಾಸತ್ತಾತ್ಮಕ ನಿಲುವು ಹೊಂದಿರುವ ರಾಜಕೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ಯೆಚೂರಿ ಅವರ ನಿಲುವಾಗಿತ್ತು. ಪ್ರಕಾಶ್ ಕಾರಟ್ ಅವರ ಬಣ ಯೆಚೂರಿಯವರ ನಿಲುವನ್ನು ವಿರೋಧಿಸಿತ್ತು. ಹೀಗಾಗಿಯೇ ಅವರು ತಮ್ಮ ಕರಡನ್ನು ಮಂಡಿಸದಂತೆ ತಡೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)