ವಿಮಾನ ನಿಲ್ದಾಣ ಬಳಿ ಗಾಳಿಪಟ ಆಕಾಶಬುಟ್ಟಿಗಳಿಗೆ ನಿಷೇಧ?

ಮಂಗಳವಾರ, ಮಾರ್ಚ್ 19, 2019
20 °C

ವಿಮಾನ ನಿಲ್ದಾಣ ಬಳಿ ಗಾಳಿಪಟ ಆಕಾಶಬುಟ್ಟಿಗಳಿಗೆ ನಿಷೇಧ?

Published:
Updated:
ವಿಮಾನ ನಿಲ್ದಾಣ ಬಳಿ ಗಾಳಿಪಟ ಆಕಾಶಬುಟ್ಟಿಗಳಿಗೆ ನಿಷೇಧ?

ನವದೆಹಲಿ: ವಿಮಾನನಿಲ್ದಾಣಗಳ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಆಕಾಶಬುಟ್ಟಿ, ಶುಭಾಶಯ ಕೋರುವ ಗಾಳಿಪಟ ಹಾರಿಸುವುದನ್ನು ನಿಷೇಧಿಸಲು ನಾಗರಿಕ ವಿಮಾನಯಾನ ಸಚಿವಾಲಯ ಚಿಂತಿಸಿದೆ.

ಇವುಗಳಿಂದ ಪೈಲಟ್‌ಗಳಿಗೆ ಮಾತ್ರವಲ್ಲದೆ, ವಿಮಾನಗಳ ಹಾರಾಟಕ್ಕೆ  ಅಡಚಣೆ ಉಂಟಾಗಲಿದೆ. ಹೀಗಾಗಿ ಈಗಿರುವ ವಿಮಾನ ಸಂಚಾರ ನಿಯಮಗಳಿಗೆ ಶೀಘ್ರವೇ ತಿದ್ದುಪಡಿ ತರಲು ಉದ್ದೇಶಿಸಿದೆ.

ಗಾಳಿಪಟ ಹಾರಿಸುವುದರಿಂದ ವಿಮಾನನಿಲ್ದಾಣದ ಕಾರ್ಯಾಚರಣೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗುತ್ತದೆ. ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಆಕಾಶಬುಟ್ಟಿ ಹಾರಿಸಿರುವುದು ಕಂಡುಬಂದಿದೆ. ಈ ದೀಪಗಳು ವಿಮಾನಗಳಿಗೆ ಅಪಾಯ ಉಂಟು ಮಾಡಬಹುದು. ಈ ಕಾರಣಕ್ಕೆ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry