ಶುಕ್ರವಾರ, ಡಿಸೆಂಬರ್ 6, 2019
25 °C

ಕ್ಯಾಬ್‌ನಲ್ಲಿ ಹಸ್ತಮೈಥುನ: ಉಬರ್‌ ಚಾಲಕ ಬಂಧನ

Published:
Updated:
ಕ್ಯಾಬ್‌ನಲ್ಲಿ ಹಸ್ತಮೈಥುನ: ಉಬರ್‌ ಚಾಲಕ ಬಂಧನ

ನವದೆಹಲಿ: ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮುಂದೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಉಬರ್ ಕ್ಯಾಬ್‌ ಚಾಲಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಇದೇ 15ರಂದು ಈ ಪ್ರಕರಣ ನಡೆದಿದ್ದು, ಚಾಲಕನನ್ನು ಶೊಕೀನ್ ಖಾನ್‌ ಎಂದು ಗುರುತಿಸಲಾಗಿದೆ. ಅವನ ಬಳಿ ಇರುವ ಚಾಲನಾ ಪರವಾನಗಿಯೂ ನಕಲಿ’ ಎಂದು ಪೊಲೀಸರು ತಿಳಿಸಿದ್ದಾರೆ.

’ವಿಮಾನ ನಿಲ್ದಾಣಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದೆ. ಅದರ ಚಾಲಕ ಕ್ಯಾಬ್‌ ಚಾಲನೆ ಮಾಡುತ್ತಲೇ ಹಸ್ತಮೈಥುನ ಮಾಡಿಕೊಂಡ. ಜನಪಥ್‌ ಬಳಿ ಬರುತ್ತಿದ್ದಂತೆಯೇ ಸಮೀಪದ ಪೊಲೀಸ್‌ ವಾಹನದ ಬಳಿ ಕ್ಯಾಬ್‌ ನಿಲ್ಲಿಸಲು ಹೇಳಿದೆ. ಆದರೆ ಅವನು ಅಲ್ಲಿಂದ ತಪ್ಪಿಸಿಕೊಂಡ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘ದೂರು ಆಧರಿಸಿ, ಚಾಲಕನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ತನಿಖೆಗೆ ಸಹಕರಿಸುವುದಾಗಿ ‘ಉಬರ್’ ತಿಳಿಸಿದೆ.

ಪ್ರತಿಕ್ರಿಯಿಸಿ (+)