ಭಾನುವಾರ, ಡಿಸೆಂಬರ್ 15, 2019
25 °C

ಪೈರಸಿ ವಿರುದ್ಧದ ಚಳವಳಿಗೆ ವಿದ್ಯಾ ಬಾಲನ್‌ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

ಪೈರಸಿ ವಿರುದ್ಧದ ಚಳವಳಿಗೆ ವಿದ್ಯಾ ಬಾಲನ್‌ ಬೆಂಬಲ

ಮುಂಬೈ: ಸಿನಿಮಾ ಪೈರಸಿ ನಿಲ್ಲಿಸಲು ನಡೆಯುತ್ತಿರುವ ಚಳವಳಿಗೆ ನಟಿ ವಿದ್ಯಾ ಬಾಲನ್ ಬೆಂಬಲ ಸೂಚಿಸಿದ್ದಾರೆ.

ಪೈರಸಿ ವಿರುದ್ಧದ ಚಳವಳಿಯ ಭಾಗವಾಗಿ ಕಳೆದ ತಿಂಗಳು ದೆಹಲಿಯಲ್ಲಿ ನಡೆದ ‘ನಕಲು ಮಾಡುವುದು ಮತ್ತು ಕಾನೂನು ಜಾರಿಗೊಳಿಸುವ ಏಜೆನ್ಸಿಗಳ ಪಾತ್ರ’ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು, ಆ ಕುರಿತ ವಿಡಿಯೊ ಲಿಂಕ್‌ ಅನ್ನು ಮರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವ ಸುರೇಶ್ ಪ್ರಭು ಅವರ ಹಳೆಯ ಟ್ವೀಟ್‌ವೊಂದನ್ನು ಶೇರ್‌ ಮಾಡಿರುವ ಅವರು ‘ಚಿತ್ರರಂಗದ ಪ್ರಮುಖ ಚಳವಳಿಯ ಭಾಗವಾಗಿರುವುದು ಸಂತಸ ತಂದಿದೆ. ನಾವೆಲ್ಲ ಒಗ್ಗೂಡಿ ಪೈರಸಿ ವಿರುದ್ಧ ಹೋರಾಡಬೇಕಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಭಾರತೀಯ ನಿರ್ಮಾಪಕರ ಸಂಘದ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾ ಬಾಲನ್‌ ಪೈರಸಿ ವಿರುದ್ಧ ಮಾತನಾಡಿರುವುದನ್ನು ಒಮ್ಮೆ ನೋಡಿ’ ಎಂದು ಸುರೇಶ್ ಪ್ರಭು ಟ್ವೀಟ್‌ ಮಾಡಿದ್ದರು.

ಪ್ರತಿಕ್ರಿಯಿಸಿ (+)