ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಇಲಾಖೆ: ಅನುಕಂಪ ಆಧರಿತ ನೌಕರಿಗೆ ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮೃತಪಟ್ಟ ಅಥವಾ ವೈದ್ಯಕೀಯ ಕಾರಣಗಳಿಂದಾಗಿ ಸ್ವಯಂನಿವೃತ್ತಿ ಪಡೆಯುವ ಉದ್ಯೋಗಿಯ ಹೆಂಡತಿಗೆ ಅನುಕಂಪ ಆಧರಿತ ನೌಕರಿ ನೀಡುವಾಗ ಅನುಸರಿಸುತ್ತಿದ್ದ ಕನಿಷ್ಠ ವಿದ್ಯಾರ್ಹತೆಯ ಕಡ್ಡಾಯ ನಿಯಮವನ್ನು ರೈಲ್ವೆ ಇಲಾಖೆ ತೆಗೆದುಹಾಕಿದೆ.

ಅನುಕಂಪ ಆಧಾರಿತ ನೌಕರಿ ನೀಡುವಾಗ ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆ ಕುರಿತು ಸಾಕಷ್ಟು ಮಂದಿ ಸ್ಪಷ್ಟನೆ ಕೇಳಿದ್ದರು. ಈ ಕುರಿತು ಪರಿಶೀಲನೆ ನಡೆಸಿ, ಈಗಿರುವ ನಿಯಮವನ್ನು ತೆಗೆದುಹಾಕಲು ರೈಲ್ವೆ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದ್ದು ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಆ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಅನುಕಂಪದ ಮೇಲೆ ನೌಕರಿ ನೀಡಬಹುದು.

ಲೆವೆಲ್‌–1 ಅಥವಾ ‘ಡಿ’ ಗ್ರೂಪ್‌ ಹುದ್ದೆಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಎಂಬ ನಿಯಮ ಇದುವರೆಗೆ ಜಾರಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT