ಮಂಗಳವಾರ, ಡಿಸೆಂಬರ್ 10, 2019
26 °C

ಹಿರಿಯ ಪತ್ರಕರ್ತ ಟಿ.ವಿ.ಆರ್ ಶೆಣೈ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ಪತ್ರಕರ್ತ ಟಿ.ವಿ.ಆರ್ ಶೆಣೈ ನಿಧನ

ಉಡುಪಿ: ಹಿರಿಯ ಪತ್ರಕರ್ತ ಟಿ.ವಿ.ಆರ್. ಶೆಣೈ (77) ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೇರಳದ ಎರ್ನಾಕುಲಂನವರಾದ ಅವರು, ‘ಸಂಡೇ ಮೇಲ್‌’, ‘ದ ವೀಕ್’ ನಿಯತಕಾಲಿಕ ಸಂಪಾದಕರಾಗಿ, ಇಂಡಿಯನ್ ಎಕ್ಸ್‌ಪ್ರೆಸ್‌, ಮಲಯಾಳ ಮನೋರಮಾ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್, ಗಲ್ಫ್ ನ್ಯೂಸ್ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಅಂಕಣವನ್ನು ಬರೆಯುತ್ತಿದ್ದರು. 2013ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪ್ರತಿಕ್ರಿಯಿಸಿ (+)