ಅಮೆರಿಕೆಗೆ ಭೇಟಿ ವೀಸಾ ಅರ್ಜಿ ಸಲ್ಲಿಸಲು ಸೂಚನೆ

7

ಅಮೆರಿಕೆಗೆ ಭೇಟಿ ವೀಸಾ ಅರ್ಜಿ ಸಲ್ಲಿಸಲು ಸೂಚನೆ

Published:
Updated:

ನವದೆಹಲಿ: ಬೇಸಿಗೆ ರಜೆ ಅಂಗವಾಗಿ ಅಮೆರಿಕ ಪ್ರವಾಸ ಕೈಗೊಳ್ಳಲು ಬಯಸುವವರು ವೀಸಾಗೆ ಶೀಘ್ರವೇ ಅರ್ಜಿ ಸಲ್ಲಿಸುವಂತೆ ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.

ರಜೆ ಅವಧಿಯಲ್ಲಿ ಹೆಚ್ಚು ಜನರು ಪ್ರವಾಸ ಕೈಗೊಳ್ಳುತ್ತಾರೆ. ವೀಸಾ ಸಂದರ್ಶನಕ್ಕೆ ಹಾಜರಾಗಲು ಕನಿಷ್ಠ 30 ದಿನಗಳು ಕಾಯಬೇಕಿರುವುದರಿಂದ ಶೀಘ್ರದಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಸಲಹೆ ನೀಡಿದೆ.

ಬೆಂಗಳೂರು, ಹೈದರಾಬಾದ್‌, ಕೋಲ್ಕತ್ತ, ಚೆನ್ನೈ, ಮುಂಬೈನಲ್ಲಿರುವ ಕಾನ್ಸುಲೇಟ್‌ ಕಚೇರಿಗಳಲ್ಲಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆ ಇರುವುದರಿಂದ ಅದಕ್ಕೆ ಬೇಕಾದ ಸಿದ್ಧತೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry