ಸೋಮವಾರ, ಡಿಸೆಂಬರ್ 9, 2019
22 °C

ಅತ್ಯಾಚಾರಕ್ಕೆ ಯತ್ನ: ನಗರಸಭೆ ಮಾಜಿ ಅಧ್ಯಕ್ಷನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಾಚಾರಕ್ಕೆ ಯತ್ನ: ನಗರಸಭೆ ಮಾಜಿ ಅಧ್ಯಕ್ಷನ ಬಂಧನ

ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ, ಇಲ್ಲಿನ ನಗರಸಭೆ ಮಾಜಿ ಅಧ್ಯಕ್ಷ ಮೌಲಾಸಾಬ್‌ ಬೂದಿಹಾಳ (65) ಎಂಬಾತನನ್ನು ಬುಧವಾರ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಿಗ್ಗೆ ತನ್ನ ಮನೆಯ ಕಾಂಪೌಂಡ್‌ ಒಳಗೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೊಲೇಟ್ ಕೊಡುವ ನೆಪದಲ್ಲಿ ಒಳಗೆ ಕರೆದ ಆರೋಪಿ, ಅಡುಗೆ ಮನೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕೂಗಿಕೊಂಡಿದ್ದಾಳೆ. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸೋದರ ಮಾವ ಓಡಿ ಬಂದು ರಕ್ಷಣೆ

ಮಾಡಿದ್ದಾರೆ.

ವಿಷಯ ತಿಳಿದ ಸ್ಥಳೀಯರು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿ ಕುಟುಂಬದವರು ನೀಡಿದ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಮೌಲಾಸಾಬ್‌ನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ, ಚಿತ್ರೀಕರಣ

ನವದೆಹಲಿ (ಪಿಟಿಐ): ದೆಹಲಿಯ ಹೊರವಲಯದ ರೋಹಿಣಿ ಪ್ರದೇಶದಲ್ಲಿ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ನೆರೆಮನೆಯಾತ ಅತ್ಯಾಚಾರ ನಡೆಸಿದ್ದು, ಅದನ್ನು ಆತನ ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

‘ಆರೋಪಿಯು ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆಸುತ್ತೇನೆ. ಅದನ್ನು ಚಿತ್ರೀಕರಿಸಿ ಎಂದು ತನ್ನ ಇಬ್ಬರು ಸ್ನೇಹಿತರನ್ನು ಕರೆಸಿದ್ದಾನೆ. ಕೃತ್ಯ ಎಸಗಿದ ಮೇಲೆ ಆರೋಪಿಗಳು ಬಾಲಕಿಯನ್ನು ಆಕೆಯ ಮನೆಗೆ ಕಳುಹಿಸಿದ್ದಾರೆ. ಆದರೆ ಬಾಲಕಿ ತನ್ನ ಪೋಷಕರಿಗೆ ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ವಿಡಿಯೊವನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಆ ವಿಡಿಯೊವನ್ನು ಸಂತ್ರಸ್ತ ಬಾಲಕಿಯ ಸಂಬಂಧಿಯೊಬ್ಬರು ನೋಡಿ, ಬಾಲಕಿಯ ತಾಯಿಗೆ ಮುಟ್ಟಿಸಿದ್ದಾರೆ.

ಪ್ರತಿಕ್ರಿಯಿಸಿ (+)