ಸೋಮವಾರ, ಜೂಲೈ 13, 2020
23 °C

ದಾಬಸ್ ಪೇಟೆ: ವಿವಿಧೆಡೆ ಬಸವ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಬಸ್ ಪೇಟೆ: ವಿವಿಧೆಡೆ ಬಸವ ಜಯಂತಿ ಆಚರಣೆ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಶಿರಗನಹಳ್ಳಿ ಬಸವಣ್ಣ ದೇವಾಲಯದಲ್ಲಿ ಬಸವಣ್ಣ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪೂಜೆ ಸಲ್ಲಿಸಿದರು. ಪಾನಕ, ಮಜ್ಜಿಗೆ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿಡವಂದ ಗ್ರಾಮದಲ್ಲಿರುವ ಮಠದ ಬಸವಣ್ಣ ದೇವಾಲಯದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬಸವಪಟ್ಟಣ ದಲ್ಲಿರುವ ಭೋಗ ಬಸವಣ್ಣ ದೇವಾ ಲಯದಲ್ಲಿ ಬೆಳಿಗ್ಗೆಯಿಂದ ಅಭಿಷೇಕ ಅರ್ಚನೆಯೊಂದಿಗೆ ಪೂಜೆ ನೆರವೇರಿತು.

ದಾಬಸ್ ಪೇಟೆ ಶಿವಗಂಗೆಗಳಲ್ಲಿ ಭಕ್ತರು ಅರವಟ್ಟಿಗೆ ತೆರೆದು ದಾರಿ ಹೋಕರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆ ವಿತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.