ಕಾಂಗ್ರೆಸ್‌ ಮುಖಂಡರ ಗೋಪ್ಯ ಚರ್ಚೆ

ಭಾನುವಾರ, ಮಾರ್ಚ್ 24, 2019
32 °C

ಕಾಂಗ್ರೆಸ್‌ ಮುಖಂಡರ ಗೋಪ್ಯ ಚರ್ಚೆ

Published:
Updated:
ಕಾಂಗ್ರೆಸ್‌ ಮುಖಂಡರ ಗೋಪ್ಯ ಚರ್ಚೆ

ಮೈಸೂರು: ಬಂಡಾಯ ಶಮನ ಹಾಗೂ ಬಾದಾಮಿ ಕ್ಷೇತ್ರದ ಟಿಕೆಟ್‌ ಗೊಂದಲ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾರಥ್ಯದಲ್ಲಿ ಕಾಂಗ್ರೆಸ್‌ ಮುಖಂಡರು ಬುಧವಾರ ರಾತ್ರಿ ಗೋಪ್ಯ ಸಭೆ ನಡೆಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ವಿಶೇಷ ವಿಮಾನದಲ್ಲಿ ದಿಢೀರ್ ಆಗಿ ಮೈಸೂರಿಗೆ ಬಂದು ಹೋಟೆಲ್‌ವೊಂದರಲ್ಲಿ ಚರ್ಚಿಸಿದರು.

ಕಾಂಗ್ರೆಸ್‌ನ 218 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ನಾಲ್ವರು ಜೊತೆಗೂಡಿ ಸಭೆ ನಡೆಸಿದ್ದಾರೆ.

ಬದಾಮಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಬಿ.ಬಿ.ಚಿಮ್ಮನಕಟ್ಟಿ ಕೂಡ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಈ ಸಂದರ್ಭದಲ್ಲಿ ಪ್ರಯತ್ನಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಗರಂ ಆದರು ಎನ್ನಲಾಗಿದೆ.

ಚಿಮ್ಮನಕಟ್ಟಿ ಬದಲಿಗೆ ಡಾ.ದೇವರಾಜ್ ಪಾಟೀಲ ಅವರಿಗೆ ಈಗಾಗಲೇ ಈ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಆದರೆ, ಡಾ.ಪರಮೇಶ್ವರ್‌ ಅವರು ‘ಬಿ’ ಫಾರಂ ತಡೆ ಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry