ಭಾನುವಾರ, ಡಿಸೆಂಬರ್ 15, 2019
19 °C

ಸುಮತಿನಾಥ ಜೈನ ಬಸದಿ ರಜತ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮತಿನಾಥ ಜೈನ ಬಸದಿ ರಜತ ಮಹೋತ್ಸವ

ಬೆಂಗಳೂರು: ಯಲಹಂಕ ಹಳೇನಗರದ ಸುಮತಿನಾಥ ಜೈನ್ ಬಸದಿಯ ರಜತ ಮಹೋತ್ಸವ ಸಮಾರಂಭ ನಡೆಯಿತು.

ದೇವರ ನಾಮಗಳ ಭಜನೆ, ಧ್ಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರಾವಕರು ಜನ್ಮರಥ ಕಲ್ಯಾಣ ಉತ್ಸವದಲ್ಲಿ ಪುಷ್ಪಾರ್ಚನೆ ಸಮರ್ಪಿಸಿದರು.

ಸುಮತಿನಾಥ್ ಭಗವಾನ್ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾತನಾಡಿದ ದೇವಾಲಯದ ಟ್ರಸ್ಟಿ ಪ್ರಕಾಶ್ಚಂದ್ರ ಜೈನ್ ಕೊಠಾರಿ, ‘ಜೈನ ಸಮುದಾಯದ ಕುಟುಂಬ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಮಾನಸಿಕ ನೆಮ್ಮದಿ ಹಾಗೂ ಖುಷಿತಂದಿದೆ’ ಎಂದರು.

ಪ್ರತಿಕ್ರಿಯಿಸಿ (+)