ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ: ಜೆಡಿಯು ಪಕ್ಷದ ಮೂವರ ರಾಜೀನಾಮೆ

ಗುರುವಾರ , ಮಾರ್ಚ್ 21, 2019
32 °C

ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ: ಜೆಡಿಯು ಪಕ್ಷದ ಮೂವರ ರಾಜೀನಾಮೆ

Published:
Updated:
ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ: ಜೆಡಿಯು ಪಕ್ಷದ ಮೂವರ ರಾಜೀನಾಮೆ

ಹುಬ್ಬಳ್ಳಿ: ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಹಣ ಕೊಟ್ಟವರಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿ ಜೆಡಿಯು ಯುವ ಜನತಾ ದಳ (ಸಂಯುಕ್ತ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ ಜಾಧವ, ಧಾರವಾಡ ಜಿಲ್ಲಾ ಸಂಚಾಲಕ ನಾರಾಯಣ ಧೊಂಗಡಿ ಹಾಗೂ ನರಗುಂದ ತಾಲ್ಲೂಕು ಘಟಕದ ಅಧ್ಯಕ್ಷ ವಾಸುರೆಡ್ಡಿ ಹೆಬ್ಬಾಳ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ಪಕ್ಷದಿಂದ ಟಿಕೆಟ್ ನೀಡಬೇಕಾದರೆ ವೈಯಕ್ತಿಕವಾಗಿ ₹ 25 ಸಾವಿರ ಹಾಗೂ ಬಿ ಫಾರಂ ಕೊಡುವ ಸಂದರ್ಭದಲ್ಲಿ ಪಕ್ಷಕ್ಕೆ ₹5  ಲಕ್ಷ ದೇಣಿಗೆ ನೀಡಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮ‌ ಪಟೇಲ್ ಅವರು ಕೇಳಿದರು ಎಂದು ವಿನೋದ ಜಾಧವ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry