ಪಿಡ್ಡನಾಯಕ ಶಿವಸೇನೆ ಅಭ್ಯರ್ಥಿ, ಎಂಇಪಿಯಿಂದ ರಾಮಪ್ಪನಾಯಕ

ಬುಧವಾರ, ಮಾರ್ಚ್ 20, 2019
31 °C

ಪಿಡ್ಡನಾಯಕ ಶಿವಸೇನೆ ಅಭ್ಯರ್ಥಿ, ಎಂಇಪಿಯಿಂದ ರಾಮಪ್ಪನಾಯಕ

Published:
Updated:
ಪಿಡ್ಡನಾಯಕ ಶಿವಸೇನೆ ಅಭ್ಯರ್ಥಿ, ಎಂಇಪಿಯಿಂದ ರಾಮಪ್ಪನಾಯಕ

ಸುರಪುರ: ಸಂಘ ಪರಿವಾರದ ಹಿರಿಯ ಮುಖಂಡ ರಾಜಾ ಪಿಡ್ಡನಾಯಕ ಪ್ಯಾಪ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಶಿವಸೇನೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹಲವು ವರ್ಷಗಳಿಂದ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಬಿಜೆಪಿಯಲ್ಲಿ ಟಿಕೆಟ್‌ ಸಿಗದಿದ್ದರಿಂದ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಏಪ್ರಿಲ್‌ 21 ರಂದು ಶಿವಸೇನೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಪಿಡ್ಡನಾಯಕ ತಿಳಿಸಿದ್ದಾರೆ.

ನಗರಸಭೆ ಮಾಜಿ ಸದಸ್ಯ ರಾಜಾ ರಾಮಪ್ಪನಾಯಕ ಜೇಜಿ ಅವರು ಸುರಪುರ ಮತಕ್ಷೇತ್ರದಿಂದ ಎಂಇಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಎಂಇಪಿ ಪಕ್ಷದಿಂದ ತಮಗೆ ಟಿಕೆಟ್‌ ನೀಡಲಾಗಿದ್ದು, ಏಪ್ರಿಲ್‌ 22 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ರಾಜಾ ರಾಮಪ್ಪನಾಯಕ ಜೇಜಿ ಹೇಳಿದರು.

‘ಜೆಡಿಎಸ್‌ ಪಕ್ಷದಲ್ಲಿ ನಿಷ್ಠಾವಂತರನ್ನು ಕಡೆಗಣಿಸಿದ್ದರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry