ಸೋಮವಾರ, ಜುಲೈ 13, 2020
25 °C

ನೀಲಿ ಸೀರೆಯಲ್ಲಿ ಕಂಗನಾ ಚೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಲಿ ಸೀರೆಯಲ್ಲಿ ಕಂಗನಾ ಚೆಲುವು

‘ಕ್ವೀನ್’ ಖ್ಯಾತಿಯ ನಟಿ ಕಂಗನಾ ರೌನತ್ ಇತ್ತೀಚೆಗೆ ಸ್ನೇಹಿತರೊಬ್ಬರ ಮದುವೆಗೆ ಉಟ್ಟಿದ್ದ ತಿಳಿ ನೀಲಿ ಬಣ್ಣದ ಸೀರೆ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ.

ಅರೆ ಪಾರದರ್ಶಕವಾಗಿರುವ ಈ ತಿಳಿನೀಲಿ ಬಣ್ಣದ ಸೀರೆಯಲ್ಲಿ ಕಂಗನಾ ದಂತದ ಗೊಂಬೆಯಂತೆ ಕಂಗೊಳಿಸು ತ್ತಿದ್ದಾರೆ. ಸೀರೆಗೆ ಹೊಂದುವ ಸ್ಲೀವ್‌ಲೆಸ್‌ ರವಿಕೆ ತೊಟ್ಟಿರುವ ಸರಳ ಸುಂದರಿಯಾಗಿ ಕಾಣುತ್ತಾರೆ.

ಬೇಸಿಗೆಯ ಬಣ್ಣವೆಂದೇ ಖ್ಯಾತಿಯಾಗಿರುವ ನೀಲಿ ಬಣ್ಣದಲ್ಲಿ ಮುದ್ದುಮುದ್ದಾಗಿ ಕಾಣುತ್ತಿರುವ ಕಂಗನಾ, ತಲೆಗೂದಲನ್ನು ಎತ್ತಿಕಟ್ಟಿದ್ದಾರೆ. ಸೀರೆಯ ಅಂಚುಗಳಲ್ಲಿರುವ ಸೂಕ್ಷ್ಮ ಎಂಬ್ರಾಯ್ಡರಿ ಕಸೂತಿ ಸೀರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ಖ್ಯಾತ ವಸ್ತ್ರವಿನ್ಯಾಸಕಿ ಅನಿತಾ ಡೋಂಗ್ರೆ ವಿನ್ಯಾಸ ಮಾಡಿರುವ ಈ ಸೀರೆಯಲ್ಲಿ ಕಂಗನಾ, ವಸಂತ ಋತುವಿನ ಚೆಲುವನ್ನು ತುಂಬಿಕೊಂಡಂತೆ ಕಾಣುತ್ತಾರೆ. ಸೀರೆಯ ಬಣ್ಣಕ್ಕೆ ತಕ್ಕಂತೆ ತಿಳಿ ಗುಲಾಬಿ ಬಣ್ಣದ ಲಿಪ್‌ಸ್ಟಿಕ್, ಐ ಶ್ಯಾಡೋ ಕೂಡಾ ಕಂಗನಾ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.