ಶುಕ್ರವಾರ, ಡಿಸೆಂಬರ್ 6, 2019
25 °C

ಮಗಳೊಂದಿಗೆ ರಾಣಿ ರಿಲ್ಯಾಕ್ಸ್

Published:
Updated:
ಮಗಳೊಂದಿಗೆ ರಾಣಿ ರಿಲ್ಯಾಕ್ಸ್

‘ಹಿಚ್ಕಿ’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಟಿ ರಾಣಿ ಮುಖರ್ಜಿ, ಈಗ ಕೊಂಚ ಬಿಡುವು ಪಡೆದಿದ್ದು, ಮಗಳು ಆದಿರಾಳೊಂದಿಗೆ ಕಾಲ ಕಳೆಯುತ್ತಿದ್ದಾರಂತೆ.

ಸತತ ಚಿತ್ರೀಕರಣದ ಕಾರಣ, ಮಗಳ ಕಡೆ ಸರಿಯಾಗಿ ಗಮನ ಹರಿಸಲು ಆಗಿರಲಿಲ್ಲ. ಈಗ ಮಗಳು ಮತ್ತು ಪತಿ ಆದಿತ್ಯ ಚೋಪ್ರಾ ಜತೆ ಎಲ್ಲಾದರೂ ಹೊರಗೆ ಪ್ರವಾಸ ಹೋಗಬೇಕೆಂದುಕೊಂಡಿರುವೆ. ಪತಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಸಮಯದಲ್ಲಿ ಹೆಂಡತಿ ತುಸು ಗ್ಲ್ಯಾಮರ್ ಆಗಿ ಕಾಣಿಸಿಕೊಂಡರೆ ಪತಿಯ ಮನ ಗೆಲ್ಲಬಹುದು ಎನ್ನುವುದು ರಾಣಿ ಕಿವಿಮಾತು. 

ಪ್ರತಿಕ್ರಿಯಿಸಿ (+)