ಶನಿವಾರ, ಡಿಸೆಂಬರ್ 7, 2019
24 °C

ಮೇಕಪ್‌ಮ್ಯಾನ್‌ಗೆ ಕಾರು ಗಿಫ್ಟ್ ಕೊಟ್ಟ ಜಾಕ್ವೆಲಿನ್

Published:
Updated:
ಮೇಕಪ್‌ಮ್ಯಾನ್‌ಗೆ ಕಾರು ಗಿಫ್ಟ್ ಕೊಟ್ಟ ಜಾಕ್ವೆಲಿನ್

ಸಾಮಾನ್ಯವಾಗಿ ಸಿನಿಮಾ ಲೋಕದಲ್ಲಿ ದೊಡ್ಡ ನಟ–ನಟಿಯರು ತಮ್ಮ ಜತೆ ಕೆಲಸ ಮಾಡುವವರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಅನ್ನುವ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ, ಇದಕ್ಕೆ ಅಪವಾದವೆನ್ನುವಂತಿದೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ನಡೆ.

ಜಾಕ್ವೆಲಿನ್ ತಮ್ಮ ಮೇಕಪ್‌ಮ್ಯಾನ್ ಶಾನ್‌ ಅವರ ಹುಟ್ಟುಹಬ್ಬಕ್ಕೆ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ. ತಂಡದ ಪರಿಶ್ರಮದಲ್ಲಿ ನಂಬಿಕೆ ಇಟ್ಟಿರುವ ಜಾಕ್ವೆಲಿನ್ ತನ್ನ ಜತೆ ಕೆಲಸ ಮಾಡುವವರೂ ಸಂತಸದಿಂದ ಇರಬೇಕೆಂದು ಬಯಸುತ್ತಾರೆ. ಹಾಗಾಗಿ, ಶಾನ್‌ಗೆ ಹುಟ್ಟುಹಬ್ಬದ ನಿಮಿತ್ತ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನುತ್ತಿದೆ ಬಾಲಿವುಡ್.  ಜಾಕ್ವೆಲಿನ್ ಅವರ ಈ ನಡೆಗೆ ಬಾಲಿವುಡ್‌ನ ಕೆಲ ನಟ–ನಟಿಯರು ಮತ್ತು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)