ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಗುವ ದಾರಿಯಲ್ಲಿ’

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಸಾಗುವ ದಾರಿಯಲ್ಲಿ’
ಶಿವಶಕ್ತಿ ಮೂವೀ ಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಸುಜಾತಾ ರಾಜಪ್ಪ ನಿರ್ಮಿಸಿದ್ದಾರೆ. ಶಿವಕುಮಾರ್ ಸಿ.ಎಸ್.ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ‘ಸಾಗುವ ದಾರಿಯಲ್ಲಿ’ ಚಿತ್ರಕ್ಕೆ ಎಸ್.ನಾಗು ಸಂಗೀತ ನೀಡಿದ್ದಾರೆ.

ಸೂರ್ಯಕಾಂತ್ ಹೊನ್ನಳಿ ಛಾಯಾಗ್ರಹಣ, ಡಿ. ಎಚ್. ಸುರೇಶ್ ಸಂಕಲನ, ಸೂರಿ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಾಯಕನಾಗಿ ಅನೂಪ್ ಸಾ.ರಾ. ಗೋವಿಂದು ಅಭಿನಯಿಸಿದ್ದಾರೆ. ಪವಿತ್ರಾ ಗೌಡ, ದೇವರಾಜ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಸತ್ಯಜಿತ್, ಜೈಜಗದೀಶ್, ಹನುಮಂತೇ ಗೌಡ, ಪವನ್, ಜಹಂಗೀರ್, ಅರುಣ ಬಾಲರಾಜ್, ಸುನೇತ್ರ ಪಂಡಿತ್, ಸುಚಿತ್ರಾ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಶಿವಕುಮಾರ್ ಸಿ.ಎಸ್.ಗೌಡ ಅವರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ರುಕ್ಕು
ಬಸವರಾಜ್ ಬಳ್ಳಾರಿ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ನಿರ್ದೇಶನವನ್ನು ಮಾಡಿರುವ ಈ ಚಿತ್ರ ‘ರುಕ್ಕು’. ಡಿಂಪಲ್ ಆರ್ಟ್ಸ್ ಲಾಂಛನದಲ್ಲಿ ರಾಜಣ್ಣ ಅವರು ನಿರ್ಮಿಸಿದ್ದಾರೆ. ಎ.ಟಿ. ರವೀಶ್ ಸಂಗೀತ, ಸತೀಶ್ ಬಾಬು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಶ್ರೇಯಸ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವೇಗರಮ್ಯ, ತಿಲಕ್, ಸಾಧುಕೋಕಿಲ, ಸತ್ಯಜಿತ್, ಪದ್ಮಜಾರಾವ್ ಇದ್ದಾರೆ. ರೇಣುಕುಮಾರ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಕುಮಾರ್ ಕಲಾ ನಿರ್ದೇಶನ, ತ್ರಿಭುವನ್, ರಾಮು, ಕಂಬಿರಾಜ್ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

‘6 ಟು 6’
ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯುವಂತಹ ಘಟನೆಗಳನ್ನಿಟ್ಟುಕೊಂಡು ಶ್ರೀನಿವಾಸ್ ಶಿಡ್ಲಘಟ್ಟ ‘6 ಟೂ 6’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ಆರ್ಟ್ಸ್‌ ಲಾಂಛನದಲ್ಲಿ ಅಭಿಷೇಕ್ ಎಂ.ಎಂ. ನಿರ್ಮಿಸಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ, ಮಾನಸ ಹೊಳ್ಳ ಸಂಗೀತ, ವಿ. ಮನೋಹರ್ ಹಾಗೂ ಕೆ. ಕಲ್ಯಾಣ್ ಸಾಹಿತ್ಯ, ವಿಶ್ವ ಸಂಕಲನ, ಕೆ.ಎಲ್. ವೇಣುಗೋಪಾಲ್ ಕುದೂರು ಗುಂಡಿ ಸಂಭಾಷಣೆ ಮತ್ತು ಸಹ ನಿರ್ದೇಶನ, ರಾಜು ನೃತ್ಯ ನಿರ್ದೇಶನ, ಸೊಣ್ಣಪ್ಪ ಸಾಹಸ, ಎಂ.ಎಂ. ಅರವಿಂದ್, ಎ,ಎನ್. ಅನುಶ್ರೀ ರಘುನಂದನ್ ಸಹ ನಿರ್ಮಾಪಕರಾಗಿದ್ದು, ತಾರಖ್ ಪೊನ್ನಪ್ಪ ಸ್ವರೂಪಿಣಿ, ಸುರೇಶ್ ಹೆಬ್ಳೀಕರ್, ಸದಾಶಿವ ಬ್ರಹ್ಮಾವರ್, ಶಂಖನಾದ ಅರವಿಂದ್, ವಿನಯ್ ಅಂಕೋಲಾ, ಮೈಸೂರು ರಮಾನಂದ್, ಪ್ರದೀಪ್ ಹೆಬ್ಬಾರ್, ರಮಾ ಅರವಿಂದ್, ರಾಜ್ ಟೈಲರ್, ಹ್ಯಾರಿ, ಸಚಿನ್, ರಘುನಂದನ್ ತಾರಾಬಳಗದಲ್ಲಿದ್ದಾರೆ.

ಎ ಟಿ ಎಂ
(ಅಟೆಂಪ್ಟ್ ಟು ಮರ್ಡರ್)

ಅಮರ್ ಗೌಡ ನಿರ್ದೇಶನದ ಈ ಚಿತ್ರವನ್ನು ಎಸ್ ವಿ ನಾರಾಯಣ್ ಹಾಗೂ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಅಮರ್ ಗೌಡ ಅವರೇ ಕಥೆ ಹಾಗೂ ಚಿತ್ರಕಥೆಯನ್ನೂ ರಚಿಸಿದ್ದಾರೆ. ವಿನಯ್ ಗೌಡ, ಚಂದು, ಸೂರ್ಯ, ಶೋಭಿತಾ, ಹೇಮಲತಾ, ರಮಾಕಾಂತ್, ರಾಚಪ್ಪ, ಆರ್ಯ ಅಭಿನಯಿಸಿದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ, ರವಿ ದೇವ್ ಸಂಗೀತ ಹಾಗೂ ಜೀತ್ ಸಿಂಗ್ ಹಿನ್ನೆಲೆ ಸಂಗೀತ, ಸಂಕೇತ್ ಪೂಜಾರಿ ಸಂಕಲನ ಚಿತ್ರಕ್ಕಿದೆ.

ಕೃಷ್ಣ ತುಳಸಿ
ಅನ್ನಪೂರ್ಣೇಶ್ವರಿ ಕ್ರಿಯೇಷನ್ ಅಡಿಯಲ್ಲಿ ಎಂ. ನಾರಾಯಣಸ್ವಾಮಿ ಅವರ ನಿರ್ಮಾಣ ಮಾಡಿರುವ ‘ಕೃಷ್ಣ ತುಳಸಿ’ ಚಿತ್ರವನ್ನು ಸುಕೇಶ್ ನಾಯಕ್ ನಿರ್ದೇಶಿಸಿದ್ದಾರೆ. ನಾಯಕನಾಗಿ ಸಂಚಾರಿ ವಿಜಯ್, ನಾಯಕಿ ಮೇಘಶ್ರೀ ನಟಿಸಿದ್ದಾರೆ. ತಬಲಾ ನಾಣಿ, ಕುರಿ ಪ್ರತಾಪ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂಪಾದ ಸಂಗೀತದಲ್ಲಿ ಈಗಾಗಲೇ ಹಾಡುಗಳು ಪ್ರಸಿದ್ಧ ಆಗಿದೆ. ಯೋಗರಾಜ ಭಟ್, ಜಯಂತ ಕಾಯ್ಕಿಣಿ, ಹೃದಯ ಶಿವ, ಧನಂಜಯ್, ವರುಣ ದೇವ ಕೊಲಪು ಗೀತ ಸಾಹಿತ್ಯ ರಚಿಸಿದ್ದಾರೆ. ನವಿನ್ ಅಕ್ಷಿ ಛಾಯಾಗ್ರಾಹಕರು. ದೀಪು ಎಸ್ ಕುಮಾರ್ ಅವರು ಸಂಕಲನ ಚಿತ್ರಕ್ಕಿದೆ.

ನಾಗವಲ್ಲಿ ವರ್ಸಸ್ ಆಪ್ತಮಿತ್ರರು
ಶಂಕರ್ ಅರುಣ್ ಅವರು ಕಥೆ ಬರೆದು ನಿರ್ದೇಶಿಸಿರುವ ಸಿನಿಮಾ ಇದು. ‘ಈ ಚಿತ್ರದಲ್ಲಿ ನಿಜವಾದ ನಾಗವಲ್ಲಿ ಬಗ್ಗೆ ಒಂದು ಅಧ್ಯಯನ ಮಾಡಿ ತಿರುವಂತಪುರದ ಬಳಿ ಇರುವ ನಾಗವಲ್ಲಿ ಅರಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಶ್ವೇತಾ ಅರುಣ್ ಅವರು ಈ ಚಿತ್ರದ ನಿರ್ಮಾಪಕಿ. ಇವರ ಜೊತೆ ಪ್ರಭಿಕ್ ಮೀಡಿಯಾ ಕೂಡ ಕೈ ಜೋಡಿಸಿದೆ. ವಿಕ್ರಮ್ ಕಾರ್ತಿಕ್ ಹಾಗೂ ವೈಷ್ಣವಿ ಚಂದ್ರನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉತ್ತಮ್ ರಾಜ್ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಶ್ಯಾಮ್ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT