ಶುಕ್ರವಾರ, ಡಿಸೆಂಬರ್ 13, 2019
19 °C

ದೀಪಿಕಾ ಸಂಭಾವನೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ ಸಂಭಾವನೆ ಏರಿಕೆ

‘ಪದ್ಮಾವತ್‌’ ಹಿಟ್‌ ಆದ ಬಳಿಕ ದೀಪಿಕಾ ಪಡುಕೋಣೆ ಸಂಭಾವನೆ ಏರಿದೆ. ಶಾಹೀದ್‌ ಕಪೂರ್‌ ಮಾರುಕಟ್ಟೆ ಬೆಲೆ ಮಾತ್ರ ಕೆಲ ವರ್ಷಗಳಿಂದಲ ಏನೇನೂ ಬದಲಾಗಿಲ್ಲ.

‘ಪದ್ಮಾವತ್‌’ನಲ್ಲಿ ಮಹಾರಾವಲ್‌ ರತನ್‌ ಸಿಂಗ್‌ ರಾಜನ ಪಾತ್ರದಲ್ಲಿ ಅಭಿನಯಿಸಿದ್ದ ಶಾಹೀದ್‌ ನಟನೆಗಾಗಿ ಈಚೆಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಈ ಸಿನಿಮಾದಲ್ಲಿ ಶಾಹೀದ್‌ ಮುಖ್ಯಪಾತ್ರದಲ್ಲೇ ನಟಿಸಿದ್ದರೂ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಗಳೇ ಹೆಚ್ಚು ಸುದ್ದಿ ಮಾಡಿತ್ತು. ಶಾಹೀದ್‌ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದರೂ ಆ ಎರಡು ಪಾತ್ರಗಳ ಮುಂದೆ ಶಾಹೀದ್‌ ಪಾತ್ರಕ್ಕೆ ಹೆಚ್ಚು ಪ್ರಶಂಸೆ ಸಿಕ್ಕಿರಲಿಲ್ಲ.

ದೀಪಿಕಾ ಪಡುಕೋಣೆ ಈಗ ಒಂದು ದಿನದ ಜಾಹೀರಾತಿನ ಚಿತ್ರೀಕರಣಕ್ಕೆ ₹2.5 ಕೋಟಿ ಪಡೆಯುತ್ತಿದ್ದರೆ, ರಣವೀರ್‌ ಸಿಂಗ್‌ ₹1.75 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ‘ಪದ್ಮಾವತ್‌’ ಬಿಡುಗಡೆಗೂ ಮುಂಚೆ ದೀಪಿಕಾ ₹ 2 ಕೋಟಿ ಹಾಗೂ ರಣವೀರ್‌ ಅಂದಾಜು ₹1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆನ್ನಲಾಗಿದೆ. ಸಿನಿಮಾ ಸಂಭಾವನೆಯಲ್ಲೂ ದೀಪಿಕಾ– ರಣವೀರ್‌ ಹೆಚ್ಚಿಸಿಕೊಂಡಿದ್ದಾರೆ ಎಂದು ಬಾಲಿವುಡ್‌ನಲ್ಲಿ ಮಾತು ಕೇಳಿಬರುತ್ತಿದೆ.

ಪ್ರತಿಕ್ರಿಯಿಸಿ (+)