ನಾಸಾ: ಅನ್ಯ ಗ್ರಹದ ಪತ್ತೆಗೆ ಗಗನನೌಕೆ ಉಡಾವಣೆ

7

ನಾಸಾ: ಅನ್ಯ ಗ್ರಹದ ಪತ್ತೆಗೆ ಗಗನನೌಕೆ ಉಡಾವಣೆ

Published:
Updated:
ನಾಸಾ: ಅನ್ಯ ಗ್ರಹದ ಪತ್ತೆಗೆ ಗಗನನೌಕೆ ಉಡಾವಣೆ

ಕೇಪ್‌ ಕೆನೆವರಾಲ್‌: ಫ್ಲಾರಿಡಾದಲ್ಲಿರುವ ಕೇಪ್‌ ಕೆನೆವರಾಲ್‌ ವಾಯುನೆಲೆಯಿಂದ ಬೆಳಿಗ್ಗೆ 4.21ರ ಸುಮಾರಿಗೆ ದಿ ಟ್ರಾನ್ಸಿಟ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌ (ಟಿಇಎಸ್‌ಎಸ್‌) ಉಡಾವಣೆಗೊಂಡಿತು. ಈ ನೌಕೆಯು ಹೊಸ ಗ್ರಹದಲ್ಲಿ ಜೀವಿಗಳು ಇರುವ ಬಗ್ಗೆಯೂ ಮಾಹಿತಿ ಕಲೆಹಾಕಲಿದೆ.

‘ನಾವು ಇನ್ನಷ್ಟೇ ಕಲ್ಪಿಸಿಕೊಳ್ಳಬೇಕಿರುವ ಪ‍್ರಪಂಚವನ್ನು ಹುಡುಕಲು ಈ ನೌಕೆಯು ಸಹಾಯ ಮಾಡಲಿದೆ. ಅದು ಕೂಡ ಮನುಷ್ಯರ ವಾಸಯೋಗ್ಯ ಭೂಮಿಯಾಗಿರುವ ಸಾಧ್ಯತೆಯಿದೆ’ ಎಂದು ವಾಷಿಂಗ್ಟನ್‌ನ ನಾಸಾ ವಿಜ್ಞಾನ ವಿಭಾಗದ ಸಹ ಆಡಳಿತಾಧಿಕಾರಿ ಥಾಮಸ್‌ ಝುರ್‌ಬುಚೆನ್‌ ತಿಳಿಸಿದ್ದಾರೆ.

ಜೇಮ್ಸ್‌ ವೆಬ್‌ ವ್ಯೋಮ ಟೆಲಿಸ್ಕೋಪ್‌ಗಳಿಂದ ಈ ಗ್ರಹಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗಲಿದ್ದು, ಬ್ರಹ್ಮಾಂಡದ ಇನ್ನಷ್ಟು ಮಾಹಿತಿ ತಿಳಿಯಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry