ಬಿಎಂಡಬ್ಲ್ಯು ಎಕ್ಸ್‌3 ಹೊಸ ಆವೃತ್ತಿ ಬಿಡುಗಡೆ

7

ಬಿಎಂಡಬ್ಲ್ಯು ಎಕ್ಸ್‌3 ಹೊಸ ಆವೃತ್ತಿ ಬಿಡುಗಡೆ

Published:
Updated:
ಬಿಎಂಡಬ್ಲ್ಯು ಎಕ್ಸ್‌3 ಹೊಸ ಆವೃತ್ತಿ ಬಿಡುಗಡೆ

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಬಿಎಂಡಬ್ಲ್ಯು ಸಂಸ್ಥೆಯು ಹೊಸ ಆವೃತ್ತಿಯ ‘ಎಕ್ಸ್‌3’  ಎಸ್‌ಯುವಿ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 49.99 ಲಕ್ಷದಿಂದ ₹ 56.7 ಲಕ್ಷದವರೆಗಿದೆ.

‘ಆನ್‌ ರೋಡ್‌ ಮತ್ತು ಆಫ್‌ ರೋಡ್‌ಗಳಲ್ಲಿಯೂ ಚಲಾಯಿಸಬಹುದಾದ, ಚಾಲಕನ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿದೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ನ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ತಿಳಿಸಿದ್ದಾರೆ.

ಎರಡು ಲೀಟರ್‌ನ ನಾಲ್ಕು ಸಿಲಿಂಡರ್ ಇರುವ ಡೀಸೆಲ್‌ ಎಂಜಿನ್‌ ಇದ್ದು, 8 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಹೊಂದಿದೆ. 6 ಏರ್‌ ಬ್ಯಾಗ್‌, ಡಿಎಸ್‌ಸಿ, ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೆಕ್‌, ಎಲೆಕ್ಟ್ರಿಕ್ ವೆಹಿಕಲ್‌ ಇಮ್ಮೊಬಿಲೈಸರ್‌, ಕ್ರ್ಯಾಷ್ ಸೆನ್ಸರ್‌ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.

ಪೆಟ್ರೋಲ್‌ ಮಾದರಿಯ ಬಿಡುಗಡೆಯು ತುಸು ವಿಳಂಬವಾಗಲಿದೆ, ಆದರೆ ಈ ವರ್ಷವೇ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry