ತಂದೆಯಿಂದಲೇ ಅತ್ಯಾಚಾರ

7

ತಂದೆಯಿಂದಲೇ ಅತ್ಯಾಚಾರ

Published:
Updated:
ತಂದೆಯಿಂದಲೇ ಅತ್ಯಾಚಾರ

ಸೀತಾಪುರ(ಉತ್ತರ ಪ್ರದೇಶ):  ತನ್ನ ಇಬ್ಬರು ಸ್ನೇಹಿತರ ಜತೆ ಸೇರಿ ತಂದೆಯೇ 35 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಪ್ರಕರಣ ಇಲ್ಲಿ ನಡೆದಿದೆ.

ಏಪ್ರಿಲ್‌ 15ರಂದು ಸೀತಾಪುರದ ಕಮಲಾಪುರದ ಪ್ರದೇಶದಲ್ಲಿ ನಡೆಯುತ್ತಿದ್ದ ಉತ್ಸವಕ್ಕೆ ಮಗಳನ್ನು ತಂದೆ ಕರೆದೊಯ್ದಿದ್ದ. ಅಲ್ಲಿಗೆ ತನ್ನ ಸ್ನೇಹಿತ ಮಾನ್‌ಸಿಂಗ್‌ ಎಂಬಾತನನ್ನು ಕರೆಯಿಸಿಕೊಂಡ. ಬಳಿಕ, ಮಹಿಳೆಯ ಮನವೊಲಿಸಿ ಇನ್ನೊಬ್ಬ ಸ್ನೇಹಿತ ಮೆರಜ್‌ ನಿವಾಸಕ್ಕೆ ಮೋಟರ್‌ಸೈಕಲ್‌ನಲ್ಲಿ ಕರೆದೊಯ್ದರು. ಅಲ್ಲಿನ ಕೊಠಡಿಯೊಂದರಲ್ಲಿ 18 ಗಂಟೆಗಳ ಕಾಲ ಕೂಡಿ ಹಾಕಿದ ಮೂವರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾದ ಮಹಿಳೆ, ಮನೆಗೆ ವಾಪಸ್‌ ಬಂದು ತಾಯಿಗೆ ತನ್ನ ಮೇಲೆ ನಡೆದ ಬರ್ಬರ ಕೃತ್ಯದ ಬಗ್ಗೆ ವಿವರಿಸಿ ಪೊಲೀಸರಿಗೆ ದೂರು

ನೀಡಿದ್ದಾರೆ.

‘ಈ ಮಹಿಳೆಗೆ ಒಬ್ಬ ಮಗ ಇದ್ದಾನೆ. ಸುಮಾರು 20 ವರ್ಷಗಳ ಹಿಂದೆ ಮಹಿಳೆಯ ಮದುವೆಯಾಗಿತ್ತು. ಆದರೆ, ಗಂಡನಿಂದ ದೂರವಾಗಿ ತಂದೆಯ ಜತೆ ವಾಸಿಸುತ್ತಿದ್ದರು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮರ್ತಾಂದ್‌ ಪ್ರಕಾಶ್‌ ಸಿಂಗ್‌ ತಿಳಿಸಿದ್ದಾರೆ.

‘ಮಹಿಳೆಯ ತಂದೆ ನಡೆಸಿದ್ದ ಹಲವು ಅಪರಾಧ ಪ್ರಕರಣಗಳಲ್ಲಿ ಮಾನ್‌ಸಿಂಗ್‌ ಭಾಗಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದ್ದು, ಮಹಿಳೆಯ ತಂದೆ ಮತ್ತು ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry