‘ಮುಂದಿನ ಗುರಿ ಏಷ್ಯನ್‌ ಗೇಮ್ಸ್‌’

7

‘ಮುಂದಿನ ಗುರಿ ಏಷ್ಯನ್‌ ಗೇಮ್ಸ್‌’

Published:
Updated:
‘ಮುಂದಿನ ಗುರಿ ಏಷ್ಯನ್‌ ಗೇಮ್ಸ್‌’

ನವದೆಹಲಿ: ‘ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕದ ಗೆದ್ದಿದ್ದು ತೃಪ್ತಿ ತಂದಿಲ್ಲ. ಏಷ್ಯನ್‌ ಗೇಮ್ಸ್‌ಗಾಗಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕಿದೆ’ ಎಂದು ಭಾರತದ ಬಾಕ್ಸಿಂಗ್‌ ಪಟು ಅಮಿತ್‌ ಫಂಗಲ್‌ ಹೇಳಿದ್ದಾರೆ.

‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಈಡೇರಲಿಲ್ಲ. ಆದ್ದರಿಂದ ನನ್ನ ವೇಗ ಹೆಚ್ಚಿಸಿಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಏಷ್ಯನ್‌ ಗೇಮ್ಸ್‌ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಅದು ನಿಜಕ್ಕೂ ಅಗ್ನಿಪರೀಕ್ಷೆ. ವಿಡಿಯೊ ತುಣುಕುಗಳ ನೆರವಿನಿಂದ ನಮ್ಮ ಎದುರಾಳಿಗಳ ಆಟವನ್ನು ವೀಕ್ಷಿಸಬೇಕಿದೆ. ಆ ಮೂಲಕ ಯಾವ ವಿಭಾಗದಲ್ಲಿ ನನ್ನ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಅದಕ್ಕೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಿಕೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

‘ಕಾಮನ್‌ವೆಲ್ತ್‌ ಕೂಟದಲ್ಲಿ ಮೊದಲ ಬಾರಿಗೆ ಭಾರತದ ಎಲ್ಲ ಬಾಕ್ಸರ್‌ಗಳೂ ಸೆಮಿಫೈನಲ್‌ಗೆ ತಲುಪಿದ್ದರು. ಇದೊಂದು ದೊಡ್ಡ ಸಾಧನೆ’ ಎಂದರು.

‘ನಮ್ಮ ಸಾಧನೆಗೆ ನೂತನ ಕೋಚ್‌ ಸ್ಯಾಂಟಿಯಾಗೊ ನೀವಾ ಅವರೇ ಪ್ರಮುಖ ಕಾರಣ. ನಮ್ಮ ಸಾಮರ್ಥ್ಯದ ಮೇಲೆ ಹೆಚ್ಚು ಗಮನ ಹರಿಸುವಂತೆ ಮಾಡಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದರು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry