ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಇಂದಿನಿಂದ

7

ಫೆಡರೇಷನ್ ಕಪ್‌ ಅಥ್ಲೆಟಿಕ್ಸ್ ಇಂದಿನಿಂದ

Published:
Updated:

ಕೊಯಮತ್ತೂರು: ಫೆಡರೇಷನ್ ಕಪ್ ಜೂನಿಯರ್ ಅಥ್ಲೆಟಿಕ್ ಕೂಟಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ. ಇಲ್ಲಿನ ಕೋವೈನಲ್ಲಿರುವ ನೆಹರೂ ಕ್ರೀಡಾಂಗಣದಲ್ಲಿ ಮೂರು ದಿನ ಸ್ಪರ್ಧೆಗಳು ನಡೆಯಲಿದ್ದು 16ರಿಂದ 20 ವರ್ಷದ ಪುರುಷ ಮತ್ತು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

32 ರಾಜ್ಯಗಳ 800 ಮಂದಿ ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ ಕೂಟ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಇಲ್ಲಿ ನಡೆಯಲಿದೆ.

ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಇದಕ್ಕೂ ಮೊದಲು 11 ಸ್ಪರ್ಧೆಗಳು ನಡೆಯಲಿವೆ. ಮುಂಜಾನೆ 6 ಗಂಟೆಗೆ ಮಹಿಳೆಯರ 10 ಕಿ.ಮೀ ನಡಿಗೆಯ ಫೈನಲ್‌ನೊಂದಿಗೆ ಸ್ಪರ್ಧೆಗಳು ಆರಂಭವಾಗಲಿವೆ. ನಂತರ ಪುರುಷರ 5000 ಮೀಟರ್ಸ್ ಓಟದ ಫೈನಲ್ ನಡೆಯಲಿದೆ.

ಮಹಿಳೆಯರ 3000 ಮೀಟರ್ಸ್ ಓಟ ಮತ್ತು ಶಾಟ್‌ಪಟ್ ಫೈನಲ್ ಕೂಡ ಬೆಳಿಗ್ಗೆ ನಡೆಯಲಿದೆ. ಕರ್ನಾಟಕ ರಾಜ್ಯ ತಂಡ ಗುರುವಾರ ಬೆಳಿಗ್ಗೆಯೇ ಕೊಯಮತ್ತೂರಿಗೆ ತೆರಳಿದೆ ಎಂದು ರಾಜ್ಯ ಅಥ್ಲೆಟಿಕ್‌ ಸಂಸ್ಥೆಯ ಚಂದ್ರಶೇಖರ ರೈ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry