ಈಜಲು ಹೋದ ಮೂವರು ಬಾಲಕರು ನೀರು ಪಾಲು

7

ಈಜಲು ಹೋದ ಮೂವರು ಬಾಲಕರು ನೀರು ಪಾಲು

Published:
Updated:

ಚಿತ್ರದುರ್ಗ: ಸಿರಿಗೆರೆಮಠದ ಶಾಂತಿವನ ಕಿರು ಜಲಾಶಯಕ್ಕೆ ಈಜಲು ತೆರಳಿದ್ದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಆಕಾಶ್ (14) ಶಿವರಾಜ್ (13), ದರ್ಶನ್ (12) ಎಂದು ಗುರುತಿಸಲಾಗಿದೆ. ಈ ಮೂವರು ದಾವಣಗೆರೆ ಜಿಲ್ಲೆ ಹುಚ್ಚವ್ವನಹಳ್ಳಿ, ಚಿತ್ರದುರ್ಗದ ದಂಡಿಗೇನಹಳ್ಳಿ ಹಾಗೂ ಮುತ್ತುಗದೂರಿನವರು.

ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಬಂದಿದ್ದ ಬಾಲಕರಲ್ಲಿ 8 ಜನರು ಕಿರುಜಲಾಶಯಕ್ಕೆ ತೆರಳಿದ್ದರು. ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ನೀರಿನಿಂದ ಹೊರಗೆ ತೆಗೆಯಲಾಗಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry