ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟ್ವಾದ...

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಭಗವಾನ್‌ ಬಸವೇಶ್ವರ ತಮ್ಮ ಮೇಲೆ ಪ್ರಭಾವ ಬೀರಿದ್ದು ಹೇಗೆ ಎಂದು ಕರ್ನಾಟಕದ ಸಂತೋಷ್ ಪಾಟೀಲ್‌ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದ್ದಾರೆ.
–ಪ್ರಧಾನಿ ಕಚೇರಿ, @PMOIndia

*
ಬಸವಣ್ಣ/ಬಸವೇಶ್ವರನಿಗೆ ‘ಭಗವಾನ್‌’ ಎಂದು ಯಾವಾಗ ಮರು ನಾಮಕರಣ ಮಾಡಲಾಯಿತು? ಕನಿಷ್ಠ ಹೆಸರನ್ನಾದರೂ ಸರಿಯಾಗಿ ತಿಳಿಯಿರಿ. ಇದು ಜನರ ಭಾವನೆಗೆ ತೋರುತ್ತಿರುವ ಅಗೌರವ.
–ಪ್ರೇಮ್‌ ಕುಮಾರ್‌ ವೈ, @capremkumary

*
ಗುಜರಾತಿನವರಾಗಿರುವ ಮೋದಿ ಅವರು ಭಗವಾನ್‌ ಬಸವೇಶ್ವರರ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಆದರೆ, ಬಸವೇಶ್ವರರ ಅನುಯಾಯಿಗಳು ಮತ್ತು ಹಿಂದೂಗಳನ್ನು ವಿಭಜಿಸುವ ಲಾಭಕೋರರು ಕರ್ನಾಟಕವನ್ನು ಆಳುತ್ತಿದ್ದಾರೆ. ಅತ್ಯಂತ ದುರದೃಷ್ಟದ ಸಂಗತಿ ಎಂದರೆ, ಅವರ ನಾಯಕನಿಗೆ ಸಂತನ ಹೆಸರನ್ನು ಸರಿಯಾಗಿ ಹೇಳಲೂ ಬರುವುದಿಲ್ಲ. ಕರ್ನಾಟಕದ ಮತದಾರರೇ, ಮುಂದಿನ ಸರದಿ ನಿಮ್ಮದು. ವಿವೇಚನೆಯಿಂದ ಮತ ಹಾಕಿ.
–ಚೋಪ್ಡಾಸಾಬ್‌ @Chopdasaab

*
ಬಿ.ಎಸ್‌. ಯಡಿಯೂರಪ್ಪ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಭ್ರಷ್ಟ ಸಿದ್ದರಾಮಯ್ಯ ನೇತೃತ್ವದ ಅಪ್ರಾಮಾಣಿಕ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಬಿಎಸ್‌ವೈ ಮುಖ್ಯಮಂತ್ರಿಯಾಗಬೇಕು ಎಂಬುದು ಬಿಜೆಪಿಯ ಪ್ರತಿ ಕಾರ್ಯಕರ್ತರ ಕನಸು ಮಾತ್ರವಲ್ಲ; ಕೋಟ್ಯಂತರ ಕನ್ನಡಿಗರ ಹಂಬಲವೂ ಹೌದು.
–ಸಿ.ಟಿ. ರವಿ, @CTRavi_BJP

*
* ಮೋದಿಯವರೇ, ಕರ್ನಾಟಕಕ್ಕಾಗಿ ನಿಮ್ಮ ಯೋಜನೆ ಏನು?
* ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯೋಚಿಸುತ್ತಿದ್ದೇವೆ.
* ಹೇಗೆ?
* ಯಡ್ಡಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿ.
* ಆದರೆ, ಯಡ್ಡಿ ಭ್ರಷ್ಟ.
* ಹೆಚ್ಚು ಭ್ರಷ್ಟಾಚಾರ ಮಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವುದರಲ್ಲಿ ಬಿಜೆಪಿಗೆ ನಂಬಿಕೆ!
–#BSYforCM, ಕೀರ್ತಿ @TheDesiEdge

*
ನೀರವ್‌ ಮೋದಿ ವಿರುದ್ಧ ಕಾಂಗ್ರೆಸ್‌ ಮಾಡುತ್ತಿರುವ ವಾಗ್ದಾಳಿಯನ್ನು ನೋಡಿದರೆ, ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತೆ ಆಗುತ್ತಿದೆ. ಮೆಹುಲ್‌ ಚೋಕ್ಸಿ ಪರ ವಾದ ಮಂಡಿಸುತ್ತಿರುವ ವಕೀಲರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.
–#CongressWithChoksi ಪಿ. ಮುರಳೀಧರ್‌ ರಾವ್‌, @PMura*idharRao

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT