ಪ್ರಜಾ ಪರಿವರ್ತನ ಪಾರ್ಟಿ ಅಭ್ಯರ್ಥಿ ಪಟ್ಟಿ ಬಿಡುಗಡೆ

7

ಪ್ರಜಾ ಪರಿವರ್ತನ ಪಾರ್ಟಿ ಅಭ್ಯರ್ಥಿ ಪಟ್ಟಿ ಬಿಡುಗಡೆ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪ್ರಜಾ ಪರಿವರ್ತನ ಪಾರ್ಟಿಯ 17 ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ಬಿ. ಗೋಪಾಲ್‌ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಅಭ್ಯರ್ಥಿಗಳ ಪಟ್ಟಿ: ವಿ. ಮಹದೇವ್‌ (ಬೆಂಗಳೂರು ದಕ್ಷಿಣ), ಗೋವಿಂದರಾಜ್‌ (ಬ್ಯಾಟರಾಯನಪುರ), ವೆಂಕಟೇಶಪ್ಪ (ಬಾಗೇಪಲ್ಲಿ), ತಿಮ್ಮರಾಯಪ್ಪ (ಮಾಲೂರು), ಕಾಂತರಾಜು (ಗುಂಡ್ಲುಪೇಟೆ), ನಾಸೀರ್‌ ಖಾನ್‌ (ಶಿರಾ), ಪ್ರಕಾಶ್‌ (ಕನಕಪುರ), ಸಿ.ಆನಂದ್‌ ಕುಮಾರ್‌ (ಹೂವಿನಹಡಗಲಿ), ಶೇಖರ್‌ (ಪುತ್ತೂರು), ಸತೀಶ್‌ (ತಿ.ನರಸೀಪುರ), ಮಲ್ಲನಾಥ್‌ ಹಿರಣ್ಣಯ್ಯ (ಬಾಗಲಕೋಟೆ), ಪ್ರಭಾಕರ್‌ (ತೇರದಾಳ), ಪರಶುರಾಮ್‌ (ಜಮಖಂಡಿ), ಸುರೇಶ್‌ ಜಂಗಲಿ (ಹುನಗುಂದ), ಮಹಾಂತೇಶ್‌ (ಬಾದಾಮಿ), ಅಬ್ದುಲ್‌ ರಜಾಕ್‌ (ಹಾನಗಲ್‌), ಸೈಯದ್‌ ರೋಷನ್‌ ಮುಲ್ಲಾ (ಶಿಗ್ಗಾವಿ).

ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶ:

* ಸಾಮಾಜಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಿರಂತರವಾಗಿ ಉಪನ್ಯಾಸ, ಚರ್ಚೆ, ವಿಚಾರ ಸಂಕಿರಣ, ಅಧಿವೇಶನಗಳ ಆಯೋಜನೆ

* ಆರ್ಥಿಕ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಕೃಷಿ, ಉದ್ಯಮ, ಸೇವಾ ಚಟುವಟಿಕೆಗಳಿಗೆ ಮನ್ನಣೆ

* ಸರ್ಕಾರಿ ನೌಕರಿಗಳ ಸಂಖ್ಯೆ ಹೆಚ್ಚಳ

* ಮಾದರಿ ನಗರಗಳ ಸೃಷ್ಟಿ. ಕೈಗಾರಿಕಾ ವಲಯ, ವಾಸಯೋಗ್ಯ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿನ ಜನರಿಗೆ ಆರೋಗ್ಯಕರ ಮತ್ತು ಗೌರವಯುತ ಬದುಕನ್ನು ಖಾತರಿಪಡಿಸುವುದು

* ಪೊಲೀಸ್ ಇಲಾಖೆಯಲ್ಲಿ ಬದಲಾವಣೆ. ಜನಸ್ನೇಹಿ ಇಲಾಖೆಗೆ ಒತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry