ಕ್ಷೇತ್ರ ತೊರೆಯೋಣ: ಎದುರಾಳಿಗಳಿಗೆ ಸವಾಲು

7

ಕ್ಷೇತ್ರ ತೊರೆಯೋಣ: ಎದುರಾಳಿಗಳಿಗೆ ಸವಾಲು

Published:
Updated:
ಕ್ಷೇತ್ರ ತೊರೆಯೋಣ: ಎದುರಾಳಿಗಳಿಗೆ ಸವಾಲು

ಅರಕಲಗೂಡು: ‘ನಾಮಪತ್ರವನ್ನು ಸಲ್ಲಿಸಿದ ಬಳಿಕ ರಾಜ್ಯವನ್ನು ತೊರೆದು ಮತದಾರರಿಗೆ ಮುಕ್ತ ವಾತಾವರಣ ಕಲ್ಪಿಸೋಣ’ ಎಂದು ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಟಿ.ರಾಮಸ್ವಾಮಿ, ತಮ್ಮ ಎದುರಾಳಿಗಳಾದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಹಾಗೂ ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್ ಅವರಿಗೆ ಗುರುವಾರ ಸಲಹೆ ನೀಡಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಮೂವರೂ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದೇವೆ. ಚುನಾವಣೆ ಮುಗಿಯುವವರೆಗೂ ನಾವು ಕುಟುಂಬದವರ ಜತೆ ರಾಜ್ಯವನ್ನು ತೊರೆಯುವ ಮೂಲಕ ನಿರ್ಭೀತಿ, ಒತ್ತಡ ಮುಕ್ತ ವಾತಾವರಣ ಸೃಷ್ಟಿಸೋಣ. ತಮಗೆ ಸೂಕ್ತವಾದ ಅಭ್ಯರ್ಥಿಯನ್ನು ಆರಿಸಿಕೊಳ್ಳಲು ಮತದಾರರಿಗೆ ಅವಕಾಶ ನೀಡೋಣ’ ಎಂದು ಹೇಳಿದರು.

‘ಅಭ್ಯರ್ಥಿಗಳು ಕ್ಷೇತ್ರದಲ್ಲಿ ಇದ್ದರೆ ಸಮಸ್ಯೆ. ತಮಗೆ ಬೇಕಾದ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮತದಾರರಿಗೆ ಬಿಟ್ಟುಕೊಟ್ಟು, ನಾವು ಹೊರಗೆ ಹೋಗೋಣ. ಈ ಸವಾಲು ಸ್ವೀಕರಿಸುವ ಎದೆಗಾರಿಕೆ ಇದೆಯೇ’ ಎಂದು ಅವರು ಸವಾಲು ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry