ಐಪಿಎಲ್‌ ಬೆಟ್ಟಿಂಗ್‌: ಬಂಧನ

7

ಐಪಿಎಲ್‌ ಬೆಟ್ಟಿಂಗ್‌: ಬಂಧನ

Published:
Updated:

ಬೆಂಗಳೂರು: ಯಶವಂತಪುರದ ಕೈಗಾರಿಕಾ ಪ್ರದೇಶದಲ್ಲಿರುವ ಡಿಟಿಡಿಸಿ ಕೊರಿಯರ್‌ ಕಚೇರಿ ಬಳಿ ದಾಳಿ ನಡೆಸಿದ ಆರ್‌ಎಮ್‌ಸಿ ಯಾರ್ಡ್‌ ಪೊಲೀಸರು ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಬುಕ್ಕಿಯೊಬ್ಬನನ್ನು ಬಂಧಿಸಿದ್ದಾರೆ.

ಸೋಮಶೇಖರ್‌ ಮಾಯಣ್ಣ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ₹59 ಸಾವಿರ, ಎರಡು ಮೊಬೈಲ್‌ ಫೋನ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಇದೇ 17ರಂದು ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್‌ ತಂಡಗಳ ಮಧ್ಯೆ ಪಂದ್ಯ ನಡೆದಾಗ ಈತ ಬೆಟ್ಟಿಂಗ್‌ ನಡೆಸುತ್ತಿದ್ದ. ಆರ್‌ಸಿಬಿ ಗೆದ್ದರೆ ₹1000ಕ್ಕೆ ₹1300 ಹಾಗೂ ಮುಂಬೈ ಇಂಡಿಯನ್‌ ಗೆದ್ದರೆ 1000ಕ್ಕೆ 1100 ಕೊಡುವುದಾಗಿ ಪಂಟರ್‌ಗಳಿಗೆ ಸೂಚನೆ ರವಾನಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.‍‍‍ಪಂಟರ್‌ಗಳಾದ ರವಿ, ರಾಖಿ,  ಭರತ್‌, ಮಂಜಣ್ಣ, ಪ್ರಕಾಶ್‌, ರಾಜೀವ್‌, ಕೌಡ್ಲೆ,  ಗೋವಿಂದ, ಕುಮಾರ ಮತ್ತು ಶಿವರಾಜು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry