ಕಾಂಗ್ರೆಸ್‌ ಬಣ್ಣ ಬಯಲು: ಪ್ರಕಾಶ್ ಜಾವಡೇಕರ್

7

ಕಾಂಗ್ರೆಸ್‌ ಬಣ್ಣ ಬಯಲು: ಪ್ರಕಾಶ್ ಜಾವಡೇಕರ್

Published:
Updated:

ಬೆಂಗಳೂರು:‘ನ್ಯಾಯಮೂರ್ತಿ ಲೋಯಾ ಅವರದು ಸಹಜ ಸಾವು ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದ ಮೂಲಕ ಅಮಿತ್ ಶಾ ಹೆಸರಿಗೆ ಮಸಿ ಬಳಿ ಯುವ ಕಾಂಗ್ರೆಸ್‌ ಪ್ರಯತ್ನ ವಿಫಲವಾ ಗಿದೆ’ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಹೇಳಿದರು.

‘ರಾಜಕೀಯ ಕಾರಣಗಳಿಗೆಲೋಯಾ ಹತ್ಯೆಯಾಗಿದೆ ಎಂದು ಬಿಂಬಿಸಲಾಯಿತು. ಈ ಪ್ರಕರಣ ಮುಂದಿಟ್ಟು ಶಾ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಯಿತು. ತನಿಖೆ ನಡೆಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಕೋರ್ಟ್ ವಜಾಗೊ ಳಿಸಿದ್ದು, ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ದೇಶದ ಮುಂದೆ ಕ್ಷಮೆ ಕೇಳ ಬೇಕು’ ಎಂದೂ ಅವರು ಆಗ್ರಹಿಸಿದರು.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry