ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

7

ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

Published:
Updated:
ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪುತ್ರೋತ್ಸವದ ಸಂಭ್ರಮ ಮನೆ ಮಾಡಿದೆ. ಇತ್ತೀಚಿಗಷ್ಟೇ ಜಿರಾಫೆಯೊಂದು ಮರಿಗೆ ಜನ್ಮ ನೀಡಿತ್ತು.

ಬುಧವಾರ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿದೆ.

18 ವರ್ಷದ ವೇದ ಜನ್ಮ ನೀಡುತ್ತಿರುವ ನಾಲ್ಕನೇ ಮರಿ ಇದಾಗಿದೆ. ಇದರೊಂದಿಗೆ ಉದ್ಯಾನದ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಉದ್ಯಾನದ ವೈದ್ಯರು ಹಾಗೂ ಪ್ರಾಣಿ ಪಾಲಕರು ತಾಯಿ ಹಾಗೂ ಮರಿ ಆನೆ ಆರೈಕೆಯಲ್ಲಿ ತೊಡಗಿದ್ದಾರೆ. ವೇದಳಿಗೆ ನಿತ್ಯ ನೀಡುವ ಆಹಾರದ ಜತೆಗೆ ಹೆಸರು ಕಾಳು, ಬ್ರೆಡ್‌, ಈರುಳ್ಳಿ, ಅವಲಕ್ಕಿ, ತೆಂಗಿನಕಾಯಿ, ಬೆಲ್ಲ, ಗೋಧಿ, ಉದ್ದಿನಕಾಳು ಸೇರಿದಂತೆ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ ಎಂದು ವೈದ್ಯ ಡಾ.ಉಮಾಶಂಕರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry