ನಿತೀಶ್ ಸೇರಿ ಹನ್ನೊಂದು ಮಂದಿ ಪರಿಷತ್‌ಗೆ ಆಯ್ಕೆ

7

ನಿತೀಶ್ ಸೇರಿ ಹನ್ನೊಂದು ಮಂದಿ ಪರಿಷತ್‌ಗೆ ಆಯ್ಕೆ

Published:
Updated:

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಮೋದಿ ಮತ್ತು ಆರ್‌ಜೆಡಿ ನಾಯಕಿ ರಾಬ್ಡಿದೇವಿ ಸೇರಿದಂತೆ ಒಟ್ಟು 11 ಮಂದಿ ರಾಜ್ಯ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರಲ್ಲಿ ನಾಲ್ವರು ಆರ್‌ಜೆಡಿ, ತಲಾ ಮೂವರು ಜೆಡಿಯು ಮತ್ತು ಬಿಜೆಪಿ ಹಾಗೂ ಒಬ್ಬರು ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಿತೀಶ್‌ಕುಮಾರ್‌ ಮತ್ತು ಸುಶೀಲ್‌ಕುಮಾರ್‌ ಅವರು ಸತತ ಮೂರನೇ ಬಾರಿಗೆ ಹಾಗೂ ರಾಬ್ಡಿ ದೇವಿ ಅವರು ಎರಡನೇ ಬಾರಿಗೆ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry