ಯೂತ್‌ ಒಲಿಂಪಿಕ್ಸ್‌ಗೆ ಬಿಡ್: ಭಾರತ ನಿರ್ಧಾರ

7

ಯೂತ್‌ ಒಲಿಂಪಿಕ್ಸ್‌ಗೆ ಬಿಡ್: ಭಾರತ ನಿರ್ಧಾರ

Published:
Updated:
ಯೂತ್‌ ಒಲಿಂಪಿಕ್ಸ್‌ಗೆ ಬಿಡ್: ಭಾರತ ನಿರ್ಧಾರ

ನವದೆಹಲಿ (ಪಿಟಿಐ/ ಎಎಫ್‌ಪಿ): 2026ರ ಯುವ ಒಲಿಂಪಿಕ್ಸ್‌, 2030ರ ಏಷ್ಯನ್ ಗೇಮ್ಸ್‌ ಮತ್ತು 2032ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಭಾರತ ಒಲಿಂಪಿಕ್ಸ್‌ ಸಂಸ್ಥೆ ನಿರ್ಧರಿಸಿದೆ. ಭಾರತಕ್ಕೆ ಬಂದಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್‌ ಇದಕ್ಕೆ ಭಾರತವನ್ನು ಅಭಿನಂದಿಸಿದ್ದಾರೆ.

ಬಾಕ್‌ ಜೊತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ನರೀಂದರ್‌ ಬಾತ್ರಾ ಅವರು ‘ಮೂರು ಕ್ರೀಡಾಕೂಟಗಳಿಗೆ ಬಿಡ್ ಸಲ್ಲಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮನ್ನಣೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಎಷ್ಟರ ಮಟ್ಟಿಗೆ ಸ್ಪರ್ಧೆ ಇದೆ ಎಂದು ಕಾದು ನೋಡೋಣ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಾಕ್ ‘ಒಲಿಂಪಿಕ್ಸ್‌ನಂಥ ಕೂಟಗಳನ್ನು ಆಯೋಜಿಸಲು ಭಾರತ ಸಮರ್ಥವಾಗಿದೆ. ಸ್ವಂತ ನೆಲದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದರೆ ಭಾರತದ ಕ್ರೀಡಾಪಟುಗಳು ಹೆಚ್ಚಿನ ಯಶಸ್ಸು ಸಾಧಿಸುವರು’ ಎಂದು ಹೇಳಿದರು.

ಒಲಿಂಪಿಕ್ಸ್‌ನಲ್ಲಿ ಇ–ಸ್ಪೋರ್ಟ್ಸ್‌ಗೆ ಅವಕಾಶವಿಲ್ಲ: ‘ಕ್ರೌರ್ಯ ಬಿತ್ತುವ ಕಂಪ್ಯೂಟರ್ ಗೇಮ್‌ಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಸಾಧ್ಯವೇ ಇಲ್ಲ’ ಎಂದು ಥಾಮಸ್ ಬಾಕ್ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry