ಹಣ್ಣಿನ ವ್ಯಾಪಾರಿ ಪುತ್ರನಿಗೆ ಕೆವಿಪಿವೈ ಫೆಲೋಶಿಪ್‌

7

ಹಣ್ಣಿನ ವ್ಯಾಪಾರಿ ಪುತ್ರನಿಗೆ ಕೆವಿಪಿವೈ ಫೆಲೋಶಿಪ್‌

Published:
Updated:

ಮೈಸೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಡೆಸುವ ‘ಕಿಶೋರ್‌ ವೈಜ್ಞಾನಿಕ ಪ್ರೋತ್ಸಾಹನ ಯೋಜನಾ (ಕೆವಿಪಿವೈ) ಫೆಲೋಶಿಪ್‌’ಗೆ ಬಾಳೆಹಣ್ಣಿನ ವ್ಯಾಪಾರಿಯ ಪುತ್ರ ಎಸ್‌.ಅರುಣ್‌ಕುಮಾರ್‌ ಸೇರಿ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ನಗರದ ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಂಜುಮಳಿಗೆ ವೃತ್ತದ ಬಾಳೆಹಣ್ಣಿನ ವ್ಯಾಪಾರಿ ಶಿವಣ್ಣ ಹಾಗೂ ಮಂಜುಳಾ ದಂಪತಿಯ ಪುತ್ರ ಅರುಣ್‌ ದ್ವಿತೀಯ ಪಿಯು ವಿದ್ಯಾರ್ಥಿ. ಬಡ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಪರ್ಲ್‌ ಮೆನೆಜಿಸ್‌ ಹಾಗೂ ಎ.ಆಕಾಂಕ್ಷ್‌ ಕೂಡ ಈ ಫೆಲೋಶಿಪ್‌ಗೆ

ಅರ್ಹತೆ ಪಡೆದಿದ್ದಾರೆ. ಐಐಎಸ್‌ಸಿಯಲ್ಲಿ ಕಿರಿಯ ವಿಜ್ಞಾನಿಯಾಗಿ ಅಧ್ಯಯನ ಮುಂದುವರಿಸಲು ಅವರಿಗೆ ಅವಕಾಶ ಸಿಕ್ಕಂತಾಗಿದೆ. ಮೂಲ ವಿಜ್ಞಾನ, ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವಿದ್ಯಾರ್ಥಿಗಳಿಗೆ ಈ ಫೆಲೋಶಿಪ್‌ ನೀಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry