ಪಾನಿಪೂರಿ ಪ್ರಿಯೆ ಅದಾ

7

ಪಾನಿಪೂರಿ ಪ್ರಿಯೆ ಅದಾ

Published:
Updated:
ಪಾನಿಪೂರಿ ಪ್ರಿಯೆ ಅದಾ

ಚಿತ್ರರಂಗ ಪ್ರವೇಶಿಸಿದ ಮೊದಲ ಚಿತ್ರದಲ್ಲೇ ‘ವರ್ಷದ ಉತ್ತಮ ಆರಂಭಿಕ ನಟಿ ಪ್ರಶಸ್ತಿ’ ಪಡೆದ ಹೆಮ್ಮೆ ಅದಾ ಶರ್ಮ ಅವರದು. 2008ರಲ್ಲಿ ‘1920’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರಿಗೆ ‘ಫಿರ್‌’, ‘ಹಾಸಿ ತೋ ಫಾಸಿ’, ‘ಸನ್‌ ಆಫ್‌ ಸತ್ಯಮೂರ್ತಿ’ ಹೆಸರು ತಂದುಕೊಟ್ಟವು. ಕನ್ನಡದ ‘ರಣವಿಕ್ರಮ’ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ನಾಯಕಿಯಾಗಿ ನಟಿಸಿರುವ ಅದಾ ಶರ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ಗಾಗಿ ಶ್ರದ್ಧೆಯಿಂದ ಡಯೆಟ್‌ ಪಾಲಿಸುತ್ತಾರೆ.

‘ನಾನು ಪ್ರತಿದಿನ ವ್ಯಾಯಾಮ ಮಾಡುತ್ತೇನೆ’ ಎಂದು ಹೇಳುವ ಅದಾ, ವ್ಯಾಯಾಮ ಮಾಡಲು ಸಮಯ ಸಿಗದಿದ್ದರೆ ಹಾಡು ಹಾಕಿಕೊಂಡು ಡಾನ್ಸ್ ಮಾಡುತ್ತಾರಂತೆ, ಇಲ್ಲವೇ ಯೋಗ ಮಾಡುತ್ತಾರೆ. ಚಿತ್ರೀಕರಣದಿಂದ ಬಿಡುವು ಸಿಕ್ಕಾಗ, ಮನೆಯಲ್ಲೇ ಇದ್ದಾಗ ವೇಗನಡಿಗೆ ಅಥವಾ ಜಾಗಿಂಗ್ ಮಾಡುತ್ತೇನೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ನನಗೆ ವ್ಯಾಯಾಮ ಮಾಡಲು ನಿರ್ದಿಷ್ಟ ಸಮಯ ಸಿಗುವುದಿಲ್ಲ. ಹಾಗಾಗಿ ಚಿತ್ರೀಕರಣ ಮುಗಿಯುತ್ತಿದ್ದಂತೆ ಹತ್ತಿರದ ಜಿಮ್‌ಗೆ ಹೋಗಿ ಅಲ್ಲಿ ಕೆಲ ಕಸರತ್ತುಗಳನ್ನು ಮಾಡುತ್ತೇನೆ’ ಎನ್ನುತ್ತಾರೆ .

‘ನಾನು ದೈಹಿಕ ಕಸರತ್ತಿಗಾಗಿ ಹೆಚ್ಚು ಶ್ರಮ ವಹಿಸಲ್ಲ. ದೇಹದ ತೂಕ ಕಡಿಮೆ ಮಾಡಿಕೊಲ್ಳುವ ಕೆಲ ವ್ಯಾಯಾಮಗಳು ನನ್ನ ಆಯ್ಕೆ. ಪ್ರತಿದಿನ ವ್ಯಾಯಾಮದ ವಿಧಾನ ಬದಲಿಸುತ್ತೇನೆ. ಒಂದು ದಿನ ಜಿಮ್‌ಗೆ ಹೋದರೆ, ಮರುದಿನ ಝುಂಬಾ, ಎರಡು ದಿನ ಬಿಟ್ಟು ವ್ಯಾಯಾಮ... ಈ ರೀತಿ ದೈಹಿಕ ಕಸರತ್ತು ಮಾಡಲು ನನಗಿಷ್ಟ. ದಿನಾ ವ್ಯಾಯಾಮ ಮಾಡುವುದರಿಂದ ಮನಸು, ದೇಹ ಎರಡೂ ಉಲ್ಲಸಿತವಾಗಿರುತ್ತದೆ’ ಎಂದು ವಿವರಿಸುತ್ತಾರೆ.

ಅದಾ ಪಕ್ಕಾ ಸಸ್ಯಾಹಾರಿ. ದಿನದಲ್ಲಿ ಐದು ಲೀಟರ್‌ ನೀರು ಕುಡಿಯುತ್ತಾರೆ. ಸಿಹಿತಿಂಡಿ ಪ್ರಿಯೆಯಾಗಿರುವ ಅವರು ಡಯೆಟ್‌ಗಾಗಿ ಸಿಹಿಯಿಂದ ದೂರವಿದ್ದಾರೆ. ಇವರ ಆಹಾರದಲ್ಲಿ ಬೇಳೆ–ಕಾಳುಗಳು, ಸೊಪ್ಪು ಹೆಚ್ಚು ಇರುತ್ತವೆ. ‘ನಾನು ಪಾಲಕ್‌ ಸೊಪ್ಪನ್ನು ಆಹಾರದಲ್ಲಿ ಹೆಚ್ಚು ಬಳಸುತ್ತೇನೆ. ಇದರಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ವ್ಯಾಯಾಮ ಮಾಡುವವರಿಗೆ ಶಕ್ತಿ ಜಾಸ್ತಿ ಬೇಕು. ಕಾರ್ಬೋಹೈಡ್ರೇಟ್‌ಗಳು ಹೆಚ್ಚು ಇರುವ ತಿನಿಸುಗಳನ್ನು ತಿನ್ನುತ್ತೇನೆ. ದೇಹವನ್ನು ಹೆಚ್ಚು ದಂಡಿಸಿ, ಡಯೆಟ್‌ ಅಥವಾ ವ್ಯಾಯಾಮ ಮಾಡುವವಳು ನಾನಲ್ಲ’ ಎನ್ನುತ್ತಾರೆ ಅದಾ.

ಅದಾ ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತಿನ್ನುತ್ತಿರುತ್ತಾರೆ. ಪಾನಿಪೂರಿ ಅದಾಳ ಮೆಚ್ಚಿನ ತಿಂಡಿ. ವಾರದಲ್ಲಿ ಒಂದು ಬಾರಿ ಪಾನಿಪೂರಿ ತಿಂದು ಬಾಯಿರುಚಿಯನ್ನು ತಣಿಸಿಕೊಳ್ಳುತ್ತಾರೆ.

ಹುಟ್ಟುಹಬ್ಬ– 11 ಮೇ 1992

ಎತ್ತರ– 5 ಅಡಿ ಏಳು ಇಂಚು

ತೂಕ– 53 ಕೆ.ಜಿ

ಸುತ್ತಳತೆ– 36– 26– 38

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry